Recent Posts

Sunday, January 19, 2025
ಸುದ್ದಿ

ಮಂಗಳೂರು : ಮನೆಯ ಬಾವಿಗೆ ಹಾರಿ, ಖಾಸಗಿ ಶಾಲಾ ಶಿಕ್ಷಕಿ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಮಂಗಳೂರು : ಕೊರೋನಾ ಸೋಂಕಿನ ಭೀತಿಯಿಂದ ಲಾಕ್ ಡೌನ್ ನಂತ್ರ, ಅನ್ ಲಾಕ್ ಆದನಂತ್ರ ಶಾಲೆ ಆರಂಭಗೊಳ್ಳದ ಕಾರಣ, ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ತಮ್ಮ ಮನೆಯ ಬಾವಿಗೆ ಹಾರಿ, ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ.

ಮಂಗಳೂರಿನ ಕುಲಶೇಖರ ನಗರದ ನಿವಾಸಿಯಾಗಿದ್ದಂತ ಖಾಸಗಿ ಶಾಲಾ ಶಿಕ್ಷಕಿ ಗ್ರೆಟ್ಟಾ ಡಿಸೋಜಾ ಎಂಬುವವರು, ನಗರದ ಪ್ರತಿಷ್ಠಿತ ಖಾಸಗೀ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೋನಾ ಸೋಂಕಿನಿಂದಾಗಿ ಲಾಕ್ ಡೌನ್ ಘೋಷಣೆಯಾದ ನಂತ್ರ, ಶಾಲೆ ಆರಂಭಗೊಳ್ಳದ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ಲಾಕ್ ಡೌನ್ ಮುಕ್ತಾಯಗೊಂಡ ನಂತ್ರ, ಅನ್ ಲಾಕ್ ನಂತ್ರವೂ ಶಾಲೆ ಆರಂಭಗೊಳ್ಳದೇ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಗ್ರೆಟ್ಟಾ ಡಿಸೋಜಾ, ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು