Recent Posts

Monday, April 14, 2025
ಹೆಚ್ಚಿನ ಸುದ್ದಿ

ಬಯಲಾಯ್ತು ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಕಾರಣ-ಕಹಳೆ ನ್ಯೂಸ್

ರಾಜ್ಯ ಸರ್ಕಾರಕ್ಕೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಕೊಡಗು ಜಿಲ್ಲೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ ಕಾಮಗಾರಿಯಿಂದ ಬೆಟ್ಟದ ಮೇಲೆ ಒತ್ತಡ ಹೆಚ್ಚಾಗಿದ್ದು, ಬೆಟ್ಟದಲ್ಲಿ ಇಂಗುಗುಂಡಿ ನಿರ್ಮಿಸಿದ್ದರಿಂದ ಮಣ್ಣು ಕುಸಿತವಾಗಿದೆ. 2017 ರಿಂದಲೇ ಬೆಟ್ಟದಲ್ಲಿ ದುರಂತ ಸಂಭವಿಸುವ ಮುನ್ಸೂಚನೆ ನೀಡಲಾಗಿತ್ತು. ಹೀಗಾಗಿ ಬ್ರಹ್ಮಗಿರಿ ಬೆಟ್ಟದ ಸ್ವರೂಪಕ್ಕೆ ಧಕ್ಕೆ ಆಗಿದ್ದರಿಂದ ಅನಾಹುತವಾಗಿದೆ. ಹಾಗೆ ತಲಕಾವೇರಿಯಲ್ಲಿ ಮತ್ತೆ ಸಮಸ್ಯೆಯಾಗುವ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ವಿಜ್ಞಾನಿಗಳ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಆಗಸ್ಟ್ 5 ರಂದು ಮಧ್ಯರಾತ್ರಿ ಬ್ರಹ್ಮಗಿರಿ ಬೆಟ್ಟ ಕುಸಿದು ಬೆಟ್ಟದ ತಪ್ಪಲಿನಲ್ಲಿದ್ದ ಅರ್ಚಕರ ಕುಟುಂಬದ 5 ಮಂದಿ ಭೂಸಮಾಧಿಯಾಗಿದ್ದರು. ಹಾಗೆಯೇ ಆಗಸ್ಟ್ 14 ಮತ್ತು 15 ರಂದು ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮೇಲ್ನೋಟಕ್ಕೆ ಮಾನವನ ಹಸ್ತಕ್ಷೇಪ ಕಾರಣವನ್ನು ನೀಡಿದ್ದು, ಬಳಿಕ 16 ಪುಟಗಳ ವರದಿಯನ್ನು ಅಧಿಕಾರಿಗಳ ತಂಡ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿ ಆಧರಿಸಿ ಹೈಕೋರ್ಟ್ ಗೆ ಹೋಗಲು ಪರಿಸರವಾದಿಗಳು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ