ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇದೇ 20 ರಂದು ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ- ಕಹಳೆ ನ್ಯೂಸ್
ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಇದೇ 20 ರಂದು ಸಂಭ್ರಮ ಸಡಗರದಿಂದ ನಡೆಯಲಿದೆ.
ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ತಂತ್ರಿ ಮಾರ್ಗದರ್ಶನದಲ್ಲಿ ಇದೇ 18 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಆರಂಭಗೊಂಡು. ಡಿಸೆಂಬರ್ 19 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮತ್ತು ಮಧ್ಯಾಹ್ನ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಗಂಟೆ 7ರಿಂದ ರಂಗಪೂಜೆ ಹಾಗೂ ಪಂಚಮಿ ಉತ್ಸವ ನಡೆಯಲಿದೆ. ಡಿಸೆಂಬರ್ 20ರಂದು ಬೆಳಿಗ್ಗೆ 7 ಗಂಟೆಗೆ ಉಷಾ ಪೂಜೆ, ಪವಮಾನ ಅಭಿಷೇಕ, 8 ಗಂಟೆಗೆ ಸ್ಕಂದಯಾಗ , 9 ಗಂಟೆಗೆ ಸಾಮೂಹಿಕ ಆಶ್ಲೇಷ ಬಲಿ ಹಾಗೂ ಷಷ್ಠಿ ಮಹೋತ್ಸವ, ಮಧ್ಯಾಹ್ನ 12 ಗಂಟೆಗೆ ದೇವರ ಬಲಿ ಉತ್ಸವ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಹಾಗೆಯೇ ಅಂದು ಸಂಜೆ 6 ಗಂಟೆಗೆ ಭಜನೆ ಮತ್ತು ರಾತ್ರಿ 7ಗಂಟೆಗೆ ದುರ್ಗ ನಮಸ್ಕಾರ ಪೂಜೆ ಮತ್ತು ರಾತ್ರಿ ಗಂಟೆ 7:30 ರಿಂದ ಪರಿವಾರ ದೈವ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ಪ್ರಧಾನ ಅರ್ಚಕ ಕೆ.ಸುಂದರ ರಾವ್ ತಿಳಿಸಿದ್ದಾರೆ.ಹಾಗೆ ಧಾರ್ಮಿಕ ದತ್ತಿ ಇಲಾಖೆ ಪ್ರಕಾರ ಸಿ ದರ್ಜೆ ಹೊಂದಿರುವ ಈ ದೇವಳಕ್ಕೆ ಯಾವುದೇ ರೀತಿಯ ಮೂಲ ಆದಾಯ ಇಲ್ಲ. ಇದರಿಂದಾಗಿ ನಿತ್ಯ ಪೂಜೆ ನೆರವೇರಿಸಲು ಆರ್ಚಕರಿಗೆ ತಸ್ತೀಕು ಮಂಜೂರುಗೊಳಿಸಬೇಕು. ಹಾಗೆಯೇ ಸುಮಾರು 800 ಕ್ಕೂ ಮಿಕ್ಕಿ ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ತೀರ್ಥಕೆರೆ ಅಭಿವೃದ್ಧಿ ಸಹಿತ ಸಮುದಾಯ ಭವನ ಹಾಗೂ ಭೋಜನಾಲಯ ನಿರ್ಮಿಸಬೇಕೆಂದು ಇಲ್ಲಿನ ಭಕ್ತರು ಆಗ್ರಹಿಸಿದ್ದಾರೆ.