ಕೇರಳ: ಮಾರ್ಚ್ 17 ರಿಂದ ಕೊರೊನಾ ಮಾರ್ಗಸೂಚಿಯೊಂದಿಗೆ ಮಾ.30 ರ ತನಕ ಎಸ್ಎಸ್‍ಎಲ್ಸ್ ಮತ್ತು ಹಯರ್ ಸೆಕಂಡರಿ, ವೊಕೇಶನಲ್ ಹಯರ್ ಸೆಕಂಡರಿ ಪರೀಕ್ಷೆ ನಡೆಯಲಿದೆ ಎಂದು ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರ ಅಧ್ಯಕ್ಷತೆಯಲ್ಲಿ ನಡೆದ ಕೇರಳ ಸಚಿವ ಸಂಪುಟ ಸಭೆ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಹಾಗೆ ಪರೀಕ್ಷೆಯ ಪೂರ್ವ ತಯಾರಿಯನ್ನು ಶಿಕ್ಷಣ ಇಲಾಖೆ ಈಗಾಗಾಲೇ ಆರಂಭಿಸಿದ್ದು, ಪರೀಕ್ಷೆಯ ಹಿನ್ನಲೆಯಲ್ಲಿ ಪ್ರಾಕ್ಟಿಕಲ್ ತರಗತಿಗಳು ಜನವರಿ ಒಂದರಿಂದ ಆರಂಭಗೊಳ್ಳಲಿದೆ. ಜೂನ್ ತಿಂಗಳಿನಿಂದ ನಡೆಯುತ್ತಿರುವ ಆನ್‍ಲೈನ್ ತರಗತಿಗಳ ಮರು ಮೌಲ್ಯಮಾಪನ ಮತ್ತು ಸಂಶಯ ದೂರೀಕರಿಸುವ ನಿಟ್ಟಿನಲ್ಲಿ ಶಾಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಾದರಿ ಪರೀಕ್ಷೆ ಮತ್ತು ಕೌನ್ಸಿಲಿಂಗ್ ಶಾಲಾ ಮಟ್ಟದಲ್ಲಿ ನಡೆಯಲಿದೆ.