Sunday, January 19, 2025
ಬೆಂಗಳೂರು

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಯು|ಎ ಪ್ರಮಾಣ ಪತ್ರ- ಕಹಳೆ ನ್ಯೂಸ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ಗಿರಿರಾಜ್ ನಿರ್ದೇಶಿಸಿದ ಕನ್ನಡಿಗ ಸಿನೆಮಾಗೆ ಸೆನ್ಸಾರ್ ಬೋರ್ಡ್ ಯು|ಎ ಪ್ರಮಾಣ ಪತ್ರ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ಲಾಕ್ ಡೌನ್ ಬಳಿಕ ಸೆನ್ಸಾರ್ ಬೋರ್ಡ್ ತಲುಪಿದ್ದ ಮೊದಲ ಸಿನೆಮಾ ಇದಾಗಿದ್ದು , ನವೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭಿಸಿದ್ದು ಇದೀಗ ಕೊನೆಯ ಹಂತ ತಲುಪಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಗಿರಿರಾಜ್ ಅವರು “ನಾನು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು,ಅದನ್ನು ನಾನು ಮೊದಲೇ ಸಿದ್ಧಪಡಿಸಿದ್ದೇನೆ ಹಾಗೂ ಯೋಜನೆಯ ಪ್ರಕಾರ ಹೋಗಿದ್ದೇನೆ, ಕನ್ನಡಿಗ ಸಿನೆಮಾ ವಿವಿಧ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ” ಎಂದರು.ಈ ಸಿನೆಮಾವನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ರಿಲೀಸ್ ಮಾಡಲು ಪ್ರೊಡಕ್ಷನ್ಸ್ ಹೌಸ್ ನಿರ್ಧರಿಸಿದ್ದು. ಇನ್ನು ಈ ಸಿನೆಮಾದಲ್ಲಿ ಕನ್ನಡಿಗರ ಸಂಸ್ಕೃತಿಯ ಬಗ್ಗೆ ವಿವರಿಸಲಾಗಿದೆ ಎಂದು ಗಿರಿರಾಜ್ ಹೇಳಿದರು. ಈ ಸಿನೆಮಾದ ಅಂತಿಮ ಹಂತದ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿದ್ದು, ಇದರಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು