‘ಸುಪ್ರೀಂ ಕೋರ್ಟ್’ನಿಂದ ಮಹತ್ವದ ತೀರ್ಪು: ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಅದನ್ಯಾರು ಕಸಿದುಕೊಳ್ಳುವಂತಿಲ್ಲ..!-ಕಹಳೆ ನ್ಯೂಸ್
ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪ್ರತಿಭಟನೆ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೈತರ ಪ್ರತಿಭಟನೆಯನ್ನ ನಿಲ್ಲಿಸಲು ಹೇಳೋದಿಲ್ಲ. ಅದ್ಯಾರೇ ಆಗಲಿ ರೈತರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವುದೂ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಾಧೀಶ ಎಸ್. ಎ. ಬೋಬ್ಡೆ ಅವ್ರು, ‘ರೈತರು ತಮ್ಮ ಪ್ರತಿಭಟನೆಯನ್ನ ನಡೆಸಬೋದು. ಆದ್ರೆ, ಇದರಿಂದ ಜನರ ನಿತ್ಯದ ಬದುಕಿಗೆ ಯಾವುದೇ ಸಮಸ್ಯೆಯಾಗಬಾರದು. ಇನ್ನು ನಾವು ರೈತರ ಸ್ಥಿತಿಯನ್ನ ಅರಿತಿದ್ದು, ಅವ್ರ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದ್ರೆ, ಈ ಬದಲಾಯಿಸುವ ಪರಿಯನ್ನು ಬದಲಾಯಿಸಬೇಕಿದೆ, ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದಿದ್ದಾರೆ.