Recent Posts

Monday, January 20, 2025
ಬೆಳ್ತಂಗಡಿ

ಉಜಿರೆ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕನ ಅಪಹರಣ-ಕಹಳೆ ನ್ಯೂಸ್

ಬೆಳ್ತಂಗಡಿ : ಬಿಳಿ ಬಣ್ಣದ ಇಂಡಿಕಾ ಕಾರ್ ಒಂದರಲ್ಲಿ ಬಂದ ಅನಾಮಿಕರ ತಂಡ ಉಜಿರೆ ಸಮೀಪದ ಮೈದಾನವೊಂದರಲ್ಲಿ ಆಟವಾಡುತ್ತಿದ್ದ 8 ವರ್ಷದ ಪುಟ್ಟ ಬಾಲಕನೋರ್ವನನ್ನು ಅಪಹರಿಸಿ ಸುದ್ಧಿ ಕೇಳಿಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಇಂಡಿಕಾ ವಾಹನವು ಚಾರ್ಮಾಡಿ ಕಡೆಗೆ ಚಲಿಸಿದ್ದಾಗಿ‌ ಮಾಹಿತಿ ವ್ಯಕ್ತವಾಗಿದ್ದು, ಈ ಅಪಹರಣದ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ‌ಲಭ್ಯಿಸಿಲ್ಲ. ಹಾಗೆಯೇ ಚಾರ್ಮಾಡಿ, ಧರ್ಮಸ್ಥಳ, ಮಂಗಳೂರು ಈ ಮೇಲ್ಕಂಡ ಯಾವುದೇ ಭಾಗದಲ್ಲಿಯಾದರೂ ಬಿಳಿ ಬಣ್ಣದ ಅನಾಮಿಕ ಕಾರು ಕಾಣಿಸಿದ್ದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ. ಹಾಗೆ ಅಪರಾಧಿಗಳು ವಾಹನದ ಬಣ್ಣ ಅಥವಾ ‌ನಂಬರ್ ನ್ನು ಬದಲಾಯಿಸಿರಬಹುದೆಂಬ ಅನುಮಾನವು ಸುಳಿಯುತ್ತಿದೆ. ಈಗಾಗಲೇ ಈ‌ ಪ್ರಕರಣ ಕುರಿತಂತೆ ಕೇಸ್ ನೀಡಲಾಗಿದ್ದು, ಮಗುವಿನ ಶೋಧ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತೆ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು