ರಾಜ್ಯದಲ್ಲಿ ‘ಶಾಲೆ’ಗಳ ಆರಂಭಕ್ಕೆ ಗ್ರೀನ್ ಸಿಗ್ನಲ್.? ಸಿಎಂ ಯಡಿಯೂರಪ್ಪ ಒಪ್ಪಿಗೆಯಷ್ಟೇ ಬಾಕಿ.? – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಜನವರಿ 1, 2020ರಿಂದ ಶಾಲೆಗಳ ಆರಂಭಕ್ಕೆ ಉನ್ನತ ಮಟ್ಟದ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಹೀಗಾಗಿ ಜನವರಿ 1ರಿಂದ 10 ಮತ್ತು 12ನೇ ತರಗತಿಯ ಶಾಲೆಗಳು ರಾಜ್ಯದಲ್ಲಿ ಆರಂಭವಾಗೋದು ಪಕ್ಕಾ ಆದಂತೆ ಆಗಿದ್ದು, ಸಿಎಂ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ರೇ.. ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದಂತೆ ಆಗುತ್ತದೆ.
ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ರಾಜ್ಯದಲ್ಲಿ ಶಾಲೆಗಳು ಆರಂಭಗೊಂಡಿರಲಿಲ್ಲ. ಇಂತಹ ಶಾಲೆಗಳನ್ನು ಆರಂಭಿಸುವ ಕುರಿತಂತೆ ತಜ್ಞರ ಸಮಿತಿಯು ಸಭೆ ನಡೆಸಿ, ಶಾಲೆಗಳ ಆರಂಭದ ಬಗ್ಗೆ ಸೂಚನೆ ನೀಡಿದೆಯಂತೆ. ಜನವರಿ 1, 2021ರಿಂದಲೇ ಶಾಲೆಗಳ ಆರಂಭದ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಇಂತಹ ಶಿಫಾರಸ್ಸನ್ನು ಸಿಎಂ ಯಡಿಯೂರಪ್ಪ ಅವರ ಮುಂದಿಟ್ಟಿದ್ದು, ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿದ್ರೇ, ಜನವರಿಯಿಂದಲೇ ರಾಜ್ಯದಲ್ಲಿ 10 ರಿಂದ 12ನೇ ತರಗತಿ ಶಾಲೆಗಳು ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.