Sunday, January 19, 2025
ಬೆಂಗಳೂರು

ಬಘೀರನಾಗಿ ತೆರೆ ಮೇಲೆ ಬರಲಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ ಶ್ರೀ ಮುರಳಿ- ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಶ್ರೀ ಮುರಳಿ ಮತ್ತು ಕೆಜಿಎಫ್ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಯಾಗಿ ಹೊಸ ಸಿನೆಮಾವೊಂದನ್ನು ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಮುರಳಿ ಹುಟ್ಟುಹಬ್ಬದ ದಿನವಾದ ಇಂದು ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿನೆಮಾಗೆ ಬಘೀರ ಎಂದು ಹೆಸರಿಸಲಾಗಿದೆ. ಇನ್ನು ಬಘೀರ ಸಿನಿಮಾಗೆ ಹೊಂಬಾಳೆ ಫಿಲ್ಸಂ ಸಂಸ್ಥೆ ಹಣ ಹೂಡಿಕೆ ಮಾಡುತ್ತಿದ್ದು ಇದು ಆ ಸಂಸ್ಥೆಯ 8 ಸಿನೆಮಾವಾಗಿದೆ. ಹಾಗೆ ಈ ಸಿನೆಮಾಗೆ ಆಕ್ಷನ್ ಕಟ್ ನ್ನು ನಿರ್ದೇಶಕ ಡಾ.ಸೂರಿ ಅವರು ಹೇಳಲಿದ್ದು, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಬಘೀರ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ. ಈ ಸಿನೆಮಾದ ಇನ್ನೊಂದು ವಿಶೇಷವೆಂದರೆ ಈ ಸಿನೆಮಾಗೆ ಪ್ರಶಾಂತ್ ನೀಲ್ ಅವರೇ ಚಿತ್ರಕಥೆ ಬರೆದಿದ್ದು, ಮುರಳಿ ಅವರ ಹೊಸ ಚಿತ್ರದ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.