ಬಂಟ್ವಾಳ: ರಾಜ್ಯದ ಹಲವೆಡೆ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ಧಿ ಕೇಳಿಬರುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಕೂಡ ಚುನಾವಣಾ ಬಹಿಷ್ಕಾರ ಬ್ಯಾನರ್ ಕಂಡು ಬಂದಿದೆ.
ಈ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರವನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಗ್ಗದ ಗ್ರಾಮಸ್ಥರು ಕೈಗೊಂಡಿದ್ದಾರೆ. ತಲೆ ತಲಾಂತರಗಳಿಂದ ಸುಮಾರು 12 ರಷ್ಟು ಮನೆಗಳಿಗೆ ಸಂಪರ್ಕಿಸುತ್ತಿದ್ದ ದಾರಿಗೆ ಅಡ್ಡಲಾಗಿ ಮಾಜಿ ಪಂಚಾಯತ್ ಉಪಾಧ್ಯಕ್ಷರು ತಡೆಗೋಡೆ ಕಟ್ಡಿದ್ದು, ಈ ವಿಷಯವಾಗಿ ಗ್ರಾಮಸ್ಥರು ಮತ್ತು ಮಾಜಿ ಪಂಚಾಯತ್ ಉಪಾಧ್ಯಕ್ಷರ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಿಂದ ವಗ್ಗದ ಗ್ರಾಮಸ್ಥರು ಸೇರಿ ಚುನಾವಣೆ ಬಹಿಷ್ಕಾರ ನಿರ್ಧಾರವನ್ನು ಕೈಗೊಂಡಿದ್ದಾರೆ.