Recent Posts

Sunday, January 19, 2025
ಸುದ್ದಿ

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಚುನಾವಣೆ ; ಮಹೇಶ್ ಕಜೆ, ಪಿ.ಪಿ. ಹೆಗ್ಡೆ, ಶುಭಾಸ್ ಕೌಡಿಚ್ಚಾಕ್ ಸೇರಿದಂತೆ 99 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ – ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಗೆ ಇಂದು ರಾಜ್ಯಾದ್ಯಂತ ಚುನಾವಣೆ ನಡೆಯುತ್ತಿದ್ದು, ಪುತ್ತೂರಿನಲ್ಲೂ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣಾ ಕಣದಲ್ಲಿರುವ ಪುತ್ತೂರಿನ ವಕೀಲ ಸಂಘದ ಮಾಜಿ ಅಧ್ಯಕ್ಷರೂ, ಕರ್ನಾಟಕ ಕಾನೂನುಸೇವಾ ಪ್ರಾಧಿಕಾರದ ಮಾಜಿ ಸದಸ್ಯರಾದ ಮಹೇಶ್ ಕಜೆ ಪುತ್ತೂರಿನಲ್ಲಿ ಮತದಾನ ಮಾಡಿದರು.

99 ಅಭ್ಯರ್ಥಿಗಳ ಪೈಕಿ ಆಯ್ಕೆಯಾಗು 25 ಮಂದಿ ಯಾರು? ಯಾರಿಗೆ ಮೊದಲ ಪ್ರಾಶಸ್ತ್ಯದ ಮತ?

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 99 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಣದಲ್ಲಿರುವ 99 ಅಭ್ಯರ್ಥಿಗಳಲ್ಲಿ ಪುತ್ತೂರಿನ ಮಹೇಶ್ ಕಜೆ, ಪಿ.ಪಿ. ಹೆಗ್ಡೆ, ಮತ್ತು ಶುಭಾಸ್ ಕೌಡಿಚ್ಚಾರ್ ಕೂಡಾ ಇದ್ದಾರೆ. ಒಟ್ಟು 99 ಅಭ್ಯರ್ಥಿಗಳಲ್ಲಿ 25 ಮಂದಿಯನ್ನು ಆಯ್ಕೆ ಮಾಡಬೇಕಿದೆ. ಇಂದು ಸಂಜೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು