Sunday, January 19, 2025
ಬೆಂಗಳೂರು

ಡಿವೈಎಸ್ಪಿ ಲಕ್ಷ್ಮೀ ಸಾವಿನ ಬೆನ್ನಲ್ಲೇ ನೇಣಿಗೆ ಶರಣಾದ ಪೊಲೀಸ್ ದಂಪತಿಗಳು-ಕಹಳೆ ನ್ಯೂಸ್

ಬೆಂಗಳೂರು: ಸಿಐಡಿ‌ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಬಳಿಕ ಇದೀಗ ‌ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಪೊಲೀಸ್ ದಂಪತಿಗಳಾದ ಎಚ್.ಸಿ. ಸುರೇಶ್ ಮತ್ತು ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾನ್ ಸ್ಟೆಬಲ್ ಗಳಾಗಿದ್ದ ಇವರಿಬ್ಬರು ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು, ಆದರೆ ಅವರಿಗೆ ಮಕ್ಕಳಿರಲಿಲ್ಲ ಎಂಬ ಕೊರಗು ಯಾವಾಗಲೂ ಇತ್ತು ಎನ್ನಲಾಗಿದೆ. ಇನ್ನು ಕರ್ತವ್ಯ ನಿರ್ವಹಿಸಿ‌ ಮನೆಗೆ ಹೋದ ಸುರೇಶ್ ಮತ್ತು ಶೀಲಾ , ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮೃತದೇಹಗಳನ್ನು ಕೊತ್ತನೂರು ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು