ಕಾಸರಗೋಡು: ಕೊರೋನಾ ಕಾರಣದಿಂದ ಮಾರ್ಚ್ 10ರಿಂದ ಮುಚ್ಚಿರುವ ಅಂಗನವಾಡಿಗಳನ್ನು ಪುನಾರಾರಂಭಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ.
ಹಾಗೆಯೇ ಅಂಗನವಾಡಿ ನೌಕರರು ಹಾಗೂ ಸಹಾಯಕರು ಡಿಸೆಂಬರ್ 21 ರಿಂದ ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ.ಆರೋಗ್ಯ ಮತ್ತು ಶಿಶು ಕಲ್ಯಾಣ ಸಚಿವೆ ಕೆ.ಕೆ ಶೈಲಜಾ ಟೀಚರ್ ಅವರು ಮಕ್ಕಳ ಪ್ರವೇಶಾತಿ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.