Saturday, November 23, 2024
ಹೆಚ್ಚಿನ ಸುದ್ದಿ

ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ : ಕೇಂದ್ರ ಸರ್ಕಾರದಿಂದ ಕರಡು ಅಧಿಸೂಚನೆ ಬಿಡುಗಡೆ – ಕಹಳೆ ನ್ಯೂಸ್

ನವದೆಹಲಿ: ಎಕಾನಮಿ ಮಾಡೆಲ್ ಗಳು ಸೇರಿದಂತೆ ಎಲ್ಲಾ ಕಾರುಗಳಿಗೆ ಮುಂದಿನ ಸೀಟಿನಲ್ಲಿ ಕೂರುವ ಪ್ರಯಾಣಿಕರನ್ನು ರಕ್ಷಣೆ ಮಾಡುವ ಸಲುವಾಗಿ, ಏರ್ ಬ್ಯಾಗ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಅಂಥ ಕೇಂದ್ರ ಸರ್ಕಾರ ಶೀಘ್ರದಲ್ಲೇ ಆದೇಶ ನೀಡಲಿದೆ ಎನ್ನಲಾಗಿದೆ.’ಅಪಘಾತಸಂಭವಿಸಿದಾಗ ವಾಹನಗಳನ್ನು ರಕ್ಷಿಸಲು ಗರಿಷ್ಠ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂಬ ಒಮ್ಮತಾಭಿಪ್ರಾಯವು ಜಗತ್ತಿನಾದ್ಯಂತ ಇದೆ. ವೆಚ್ಚ ಗಳಹೊರತಾಗಿಯೂ ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ನಿಯಮ ಯಾವಾಗ ಜಾರಿಗೆ ಬರಬಹುದು ಎಂಬ ಬಗ್ಗೆ ರಸ್ತೆ ಸಾರಿಗೆ ಇಲಾಖೆ ಶೀಘ್ರದಲ್ಲಿ ಈ ಬಗ್ಗೆ ದಿನಾಂಕವನ್ನು ತಿಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಜಾರಿಗೆ ಬರಲು ಒಂದು ವರ್ಷ ಸಾಕು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಸಿಂಗಲ್ ಏರ್ ಬ್ಯಾಗ್ ಅನ್ನು ಕಡ್ಡಾಯಗೊಳಿಸುವುದರಿಂದ, ಅದು ಮುಂಭಾಗದ ಸೀಟಿನ ಸಹ-ಪ್ರಯಾಣಿಕನಿಗೆ ಗಂಭೀರ ಗಾಯ ಅಥವಾ ರಸ್ತೆ ಅಪಘಾತಸಂಭವಿಸಿದರೆ ಸಾವಿಗೀಡಾಗಬಹುದಾದ ಸಾಧ್ಯತೆಯನ್ನು ಉಂಟುಮಾಡುತ್ತದೆ ಆದರಿಂದ ಡ್ರೈವರ್‌ ಪಕ್ಕದ ಪ್ರಯಾಣಿಸುವರಿಗೂ ಕೂಡ ಏರ್ ಬ್ಯಾಗ್ ಅನ್ನು ಕಡ್ಡಾಯಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು