Wednesday, January 22, 2025
ಹೆಚ್ಚಿನ ಸುದ್ದಿ

‘ಶುಭ ಕಾರ್ಯ’ದಲ್ಲಿ ಹಣವನ್ನು ಉಡುಗೊರೆಯಾಗಿ ಕೊಡುವಾಗ ರೂ.1 ಸೇರಿಸಿ ಕೊಡುತ್ತಾರೆ ಯಾಕೆ ಗೊತ್ತಾ? – ಕಹಳೆ ನ್ಯೂಸ್

ನಾವು ಹಿಂದೂಗಳ ಶುಭ ಕಾರ್ಯಗಳಲ್ಲಿ 11,21, 51,101,1001 ಈ ರೀತಿ ಹೆಚ್ಚುವರಿಯಾಗಿ ಒಂದು ರೂಪಾಯಿ ನಾಣ್ಯ ನೀಡುವ ಪದ್ಧತಿಯನ್ನ ನೋಡಿದ್ದೇವೆ ಅಲ್ವಾ. ಹಾಗಾದ್ರೆ, ಈ ರೀತಿ ಒಂದು ರೂಪಾಯಿ ನೀಡೋದ್ಯಾಕೆ ಗೊತ್ತಾ? ಶುಭ ಕಾರ್ಯಕ್ಕೂ ಈ ಒಂದು ರೂಪಾಯಿಗೂ ಇರುವ ನಂಟಾದ್ರು ಏನು..? ಅಸಲಿಗೆ ಈ ಒಂದು ರೂಪಾಯಿಯ ಗುಟ್ಟೇನು..? ಇಲ್ಲಿದೆ ನೋಡಿ ಮಾಹಿತಿ.

ಹೌದು, ನಮ್ಮ ಸುಸಂಸ್ಕೃತ ಭಾರತದಲ್ಲಿ ಶುಭಕಾರ್ಯಗಳಿಗೆ ಅತಿಥಿಗಳಾಗಿ ಹೋದಾಗ ಅಂದ್ರೆ, ಮದುವೆ, ಹುಟ್ಟು ಹಬ್ಬ,ಆರತಕ್ಷತೆಗಳಲ್ಲಿ ಉಡುಗೊರೆಗಳನ್ನ ನೀಡೋದು ಸಹಜ ಅಲ್ವಾ. ಹೇಳ್ಬೇಕು ಅಂದ್ರೆ ಮುಯ್ಯಿಯಾಗಿ ಹಣ ನೀಡುವಾಗ ಯಾವಾಗಲೂ ರೂ.51,ರೂ101,ರೂ201,ರೂ.501,ರೂ.1001 ಈ ರೀತಿ ಕೊಡ್ತಾರೆ. ಇನ್ನು ಕೆಲವರು ತಮಗೆ ಬರಬೇಕಾದ ಹಣವನ್ನ ಹಿಂಪಡೆಯವಾಗ್ಲೂ ಇದೇ ರೀತಿ ಒಂದು ರೂಪಾಯಿಯನ್ನ ಹೆಚ್ಚಿಗೆ ಸೇರಿಸಿ ಪಡೆಕೊಳ್ತಾರೆ. ಇಷ್ಟಕ್ಕೂ ಈ ರೀತಿ ರೂ.1 ಸೇರಿಸಿ ಕೊಡೋದ್ಯಾಕೆ? ಅಥ್ವಾ ತೆಗೆದುಕೊಳ್ಳೋದ್ಯಾಕೆ?

ಜಾಹೀರಾತು
ಜಾಹೀರಾತು
ಜಾಹೀರಾತು

ಶುಭ ಕಾರ್ಯಗಳಲ್ಲಿ 1 ರೂಪಾಯಿ ಸೇರಿಸೋದ್ರ ಹಿಂದೆ ಒಂದು ಉತ್ತಮ ಉದ್ದೇಶವಿದೆ. ಅದೇನು ಅಂದ್ರೆ, ರೂ.50,ರೂ100,ರೂ200,ರೂ.500,ರೂ.1000 ಈ ಮೊತ್ತಗಳ ಕೊನೆಯಲ್ಲಿ ಸೊನ್ನೆಗಳಿವೆ ಅಲ್ವಾ. ಸೊನ್ನೆಯಿಂದ ಪ್ರಾರಂಭಿಸಿದ್ರೆ ಶುಭ ಆರಂಭ ಹೇಗೆ ಆಗುತ್ತೆ ಹೇಳಿ..? ಆದ್ದರಿಂದ ಒಂದು ರೂಪಾಯಿಯನ್ನ ಸರಳವಾಗಿ ಸೇರಿಸಿ, ಮತ್ತು ಎಣಿಕೆಯು ಒಂದು (1) ನಿಂದ ಪ್ರಾರಂಭವಾಗುತ್ತೆ. ಅದ್ರಂತೆ, ಇದೊಂದು ಒಳ್ಳೆಯ ಪ್ರಾರಂಭವೆಂದು ಪರಿಗಣಿಸಲಾಗುತ್ತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೂರ್ಣ ಸಂಖ್ಯೆಯೊಂದಿಗೆ ಹಣ ಕೊಟ್ಟರೆ, ಆ ಹಣವನ್ನ ತೆಗೆದುಕೊಂಡವ್ರಿಗೆ ತೊಂದರೆ ಉಂಟಾಗುತ್ತೆ ಅನ್ನೋದು ನಂಬಿಕೆ. ಅದಲ್ಲದೇ ಆರೋಗ್ಯ, ಆರ್ಥಿಕ ಸಮಸ್ಯೆಗಳು ಎದುರಾಗುತ್ವಂತೆ. ಇನ್ನು ವಧು-ವರರಿಗೆ ಪೂರ್ಣ ಸಂಖ್ಯೆಯ ಹಣ ನೀಡಿದ್ರೆ ಅವ್ರ ವೈವಾಹಿಕ ಜೀವನ ಸುಗಮವಾಗಿ ಸಾಗೋಲ್ಲ ಅಂತಾರೆ. ಹಾಗಾಗಿ ಸಂಖ್ಯೆಗಳನ್ನ ವಿಭಜಿಸಲು ಸಾಧ್ಯವಾಗದಂತೆ ಹಣ ನೀಡ್ತಾರೆ. ರೂ.201,ರೂ1001. ಹೀಗೆ ನೀಡಿದ್ರೆ ವಿಭಜಿಸಲು ಸಾಧ್ಯವಾಗುತ್ತಾ? ಇಲ್ಲ ಅಲ್ವಾ.. ಅದ್ರಂತೆ, ಈ ರೀತಿ ಹಣ ನೀಡೋದ್ರಿಂದ ವಧೂ ವರರ ದಾಂಪತ್ಯದಲ್ಲಿ ಯಾವುದೇ ತೊಂದರೆಗಳು ಎದುರಾಗೋಲ್ಲ, ಅವ್ರು ಒಮ್ಮತದಿಂದ ಜೀವನ ಸಾಗಿಸ್ತಾರಂತೆ. ಇನ್ನು ಪೂರ್ಣ ಸಂಖ್ಯೆಯ ಮೊತ್ತಕ್ಕೆ ರೂ.1 ನ್ನ ಸೇರಿಸಿ ಕೊಡುವವರಿಗೂ, ತೆಗೆದುಕೊಳ್ಳೊರಿಗೂ ಶುಭವಾಗುವುದ್ರಿಂದ ಹಿರಿಯರ ಆಶಿರ್ವಾದವೂ ಲಭಿಸುತ್ತೆ ಅನ್ನೋದು ನಂಬಿಕೆ. ಹಾಗಾಗಿ ನಮ್ಮವರು ಈ ರೀತಿ ಹಣ ನೀಡ್ತಾರೆ.