Sunday, January 19, 2025
ಬೆಂಗಳೂರು

ಜಾಹಿರಾತಿನ ಮೂಲಕ ಮತ್ತೆ ತೆರೆ ಮೇಲೆ ಬಂದ ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ- ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಕೊನೆಯ ಬಾರಿ ಸಂತು ಸ್ಟ್ರೇಟ್ ಫಾರ್ವರ್ಡ್ ಸಿನೆಮಾದಲ್ಲಿ ‌ತೆರೆ ಮೇಲೆ ಕಾಣಿಸಿಕೊಂಡಿದ್ದು, ಇದೀಗ ಎಣ್ಣೆಯ ಜಾಹೀರಾತೊಂದರಲ್ಲಿ ಮತ್ತೆ ಜೊತೆಯಾಗಿ ನಟಿಸಿ, ಅಭಿಮಾನಿಗಳ ನಿರೀಕ್ಷೆಯನ್ನು ನಿಜಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಗಂಡ ಹೆಂಡತಿ ಜೊತೆಯಾಗಿ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಧಿಕ ನಾಲ್ಕು ವರ್ಷಗಳ ಬಳಿಕ ನನ್ನ ನೆಚ್ಚಿನ ಸಹನಟನ ಜೊತೆ ನಟಿಸಿದ್ದಕ್ಕೆ ತುಂಬಾನೇ ಸಂತೋಷವಾಗಿದೆ, ಅಷ್ಟೇ ಖುಷಿ ನಿಮಗೂ ಆಗಿದೆ ಎಂದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.ಹಾಗೆ ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡ ಯಶ್ ಅಭಿಮಾನಿ ಮತ್ತು ಅನುಯಾಯಿಗಳಿಗೆ ಆರೋಗ್ಯಕರ ಜೀವನಪದ್ಧತಿಯನ್ನು ಪಾಲಿಸಿ ಎಂಬ ಕರೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು