Monday, January 20, 2025
ಹೆಚ್ಚಿನ ಸುದ್ದಿ

694 ರೂ. ʼಗ್ಯಾಸ್‌ ಸಿಲಿಂಡರ್‌ʼರನ್ನ ನೀವು ಕೇವಲ 194 ರೂ.ಗಳಿಗೆ ಪಡೆಯ್ಬೋದು, ಅದ್ಹೇಗೆ ? ಇಲ್ಲಿದೆ ವಿವರ..!- ಕಹಳೆ ನ್ಯೂಸ್

ಆನ್‌ಲೈನ್ ಪಾವತಿ ಕಂಪನಿ ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ನೀಡಿದ್ದು, ಈಗ ನೀವು ಅಡುಗೆಮನೆಯಲ್ಲಿ ಬಳಸುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನ 694 ರೂ. ಬದಲಿಗೆ ಕೇವಲ 194 ರೂ.ಗಳಿಗೆ ಕಾಯ್ದಿರಿಸಬಹುದು. ಅಂದ್ಹಾಗೆ, ಎಲ್‌ಪಿಜಿ ವಿತರಣೆಗೆ ಪೇಟಿಎಂ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಹೌದು, ಪೇಟಿಎಂ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನ ತಂದಿದ್ದು, ಗ್ಯಾಸ್ ಸಿಲಿಂಡರ್ ಕಾಯ್ದಿರಿಸುವಾಗ ಕಂಪನಿಯು ನಿಮಗೆ 500 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಹಾಗಾದ್ರೆ, ಕ್ಯಾಶ್‌ ಬ್ಯಾಕ್‌ ಪಡೆಯೋಕೆ ಏನು ಮಾಡ್ಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

* ಮೊದಲಿಗೆ ಪೇಟಿಎಂ ಆಪ್‌ ಓಪನ್‌ ಮಾಡಿ
* ನಂತ್ರ ನೀವು ರೀಚಾರ್ಜ್ ಮತ್ತು ಪೇ ಬಿಲ್‌ಗಳ ಆಯ್ಕೆಗೆ ಹೋಗಿ. * ಈಗ ಇಲ್ಲಿ Book a cylinder ಆಯ್ಕೆಯ ಮೇಲೆ .
* ಇಲ್ಲಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ (Gas Cylinder) ವಿವರಗಳನ್ನು ನೀಡಬೇಕಾಗುತ್ತೆ.
* ಈಗ ಪಾವತಿಯನ್ನ ನಮೂದಿಸುವ ಮೊದಲು FIRSTLPG ಪ್ರೋಮೋ ಕೋಡ್ ಅನ್ನ ಪ್ರಸ್ತಾಪದಲ್ಲಿ ಸೇರಿಸಿ.
* Paytm ನಿಂದ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಕಾಯ್ದಿರಿಸುವಾಗ ನೀವು 500 ರೂ. ಕ್ಯಾಶ್‌ಬ್ಯಾಕ್‌ ಲಾಭವನ್ನ ಪಡೆಯುತ್ತೀರಿ.

ಜಾಹೀರಾತು
ಜಾಹೀರಾತು
ಜಾಹೀರಾತು