Wednesday, January 22, 2025
ಹೆಚ್ಚಿನ ಸುದ್ದಿ

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್-ಕಹಳೆ ನ್ಯೂಸ್

ನವದೆಹಲಿ: ರೈತರು ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರೈತರ ಪ್ರತಿಭಟನಾ ಸ್ಥಳಕ್ಕೆ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್ ಶುಕ್ರವಾರ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮೀಂದರ್ ವಿದ್ಯಾರ್ಥಿ ಸಂಘಟನೆಯು ದೆಹಲಿಯ ಟಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತರಿಗಾಗಿ ಊಟದ ವ್ಯವಸ್ಥೆ ಮಾಡಿತ್ತು. ಹಾಗೆ ಸ್ಥಳಕ್ಕೆ ಆಗಮಿಸಿದ ವಿಜಯೇಂದರ್ ಸಿಂಗ್ ಅವರು ಸ್ವಯಂ ಪ್ರೇರಿತರಾಗಿ ರೈತರಿಗೆ ಆಹಾರ ಬಡಿಸಿದ್ರು.ಈ ಸಮಯದಲ್ಲಿ ಮಾತನಾಡಿದ ವಿಜಯೇಂದರ್ ಸಿಂಗ್ ಅವರು, ನಮ್ಮ ದೇಶದ ರೈತರ ಸೇವೆ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ, ನಮ್ಮ ಹೋರಾಟ ಕೇಂದ್ರ ಸರ್ಕಾರದ ವಿರುದ್ಧವಲ್ಲ‌ , ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ತಪ್ಪು ಕಾನೂನುಗಳ ವಿರುದ್ಧ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು