ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ಹೆದರಿಕೊಂಡು ಏನೇನೋ ಮಾತಾನಾಡುತ್ತಿದ್ದಾರೆ ಎಂದು ಹೇಳಿದ್ರು.
ಈ ಕುರಿತು ಸಿದ್ದರಾಮಯ್ಯ ಹಾಗೂ ಎಚ್ ಡಿಕೆ ನಡುವಿನ ಮಾತಿನ ಜಗಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ರಾಜ್ಯದಲ್ಲಿ ಆಡಳಿತ ನಡೆಸಿದವರು ಮತ್ತು ಒಂದು ಪಕ್ಷದ ನೇತೃತ್ವ ವಹಿಸಿದವರು ಮಾತನಾಡುವಾಗ ಅದಕ್ಕೆ ಇತಿಮಿತಿ ಇರಬೇಕು.ಇಲ್ಲ ಸಾರ್ವಜನಿಕರಲ್ಲಿ ಅವರು ಒಪ್ಪಿಗೆ ಪಡೆಯುವ ರೀತಿ ಇರಬೇಕು. ಆದರೆ ಅವರು ಇದನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ, ಇಂತಹ ನಡವಳಿಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೂ ಶೋಭೆಯಲ್ಲ” ಎಂದರು. ಹಾಗೆ ಇನ್ನು “ಕುಮಾರಸ್ವಾಮಿ ರಾಜಕೀಯ ಕುಟುಂಬದಿಂದ ಬಂದಿದ್ದಾರೆ, ಆದರೆ ವರ ಪಕ್ಷ ಇದೀಗ ಮುಗಿಯುವ ಹಂತಕ್ಕೆ ತಲುಪಿದೆ, ಹೀಗಿರುವಾಗ ಅವರು ತಮ್ಮ ಇತಿಮಿತಿ ಒಳಗೆ ಮಾತನಾಡಬೇಕು. ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ನೋಡಿ ಹೆದರಿಕೊಂಡು ಏನೇನೋ ಮಾತಾನಾಡುತ್ತಿದ್ದಾರೆ. ಸೋತಮೇಲೆ ಕಾರಣ ಹೇಳುವುದು ಸಹಜ, ಈ ಹಿಂದೆ ಮುಖ್ಯಮಂತ್ರಿಯಾದಂತವರು ತನ್ನ ಕ್ಷೇತ್ರ ಉಳಿಸಿಕೊಳ್ಳಲಾಗದೆ ಬೇರೊಬ್ಬರನ್ನು ದೂರಬಾರದು” ಎಂದು ಹೇಳಿದ್ದಾರೆ.