Sunday, January 19, 2025
ಸುದ್ದಿ

ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಹೊಡೆದ ಸಿಎಂ – ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಹೊಡೆದು ಹೆದರಬೇಡ ಅಂತಾ ಸಿಎಂ ಹೇಳಿರುವ ಘಟನೆಯೊಂದು ಇಂದು ನಡೆದಿದೆ.

ಇಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ನೂತ ಮೆಗಾಡೈರಿ ಉದ್ಘಾಟನೆಗಾಗಿ ಆಗಮಿಸಿದ್ರು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇವಲ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಈ ವೇಳೆ ಜಿಲ್ಲಾಧಿಕಾರಿಗಳು ಸಿಎಂ ಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ್ರು. ಏನು ಆಗಲ್ಲ, ಊಟ ಮಾಡ್ಕೊಂಡು ಹೋಗ್ತೀನಿ ಅಂತಾ ಜಿಲ್ಲಾಧಿಕಾರಿ ತಲೆಗೆ ಮೊಟಕಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/g_XibAOXgG4

ಜಾಹೀರಾತು
ಜಾಹೀರಾತು
ಜಾಹೀರಾತು

 

ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮ ಹಾಗೂ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಉದ್ಘಾಟನೆ ಮಾಡದೇ ಮೆಗಾಡೈರಿ ವೀಕ್ಷಿಸಿ ನಂತರ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು.