Recent Posts

Sunday, January 19, 2025
ಹೆಚ್ಚಿನ ಸುದ್ದಿ

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಬ್ಲೂ ಪ್ರಿಂಟ್ ಬಿಡುಗಡೆ – ಕಹಳೆ ನ್ಯೂಸ್

ಅಯೋಧ್ಯೆ : ಸುಪ್ರೀಂಕೋರ್ಟ್ ಆದೇಶದಂತೆ ಹಂಚಿಕೆಯಾದ ಐದು ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿರುವ ಅಯೋಧ್ಯೆ ಮಸೀದಿ, ಬ್ರಹ್ಮಾಂಡದ ವಿನ್ಯಾಸ ಹೊಂದಿದ್ದು, ಬಾಹ್ಯಾಕಾಶದಲ್ಲಿನ ಭೂಮಿಯಂತೆ ಗೋಲರೂಪದಲ್ಲಿ ಕಂಗೊಳಿಸಲಿದೆ.

ವಿಶೇಷವೆಂದರೆ ಭಾರತದ ಇಸ್ಲಾಮಿಕ್ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗುಮ್ಮಟಗಳು, ಕಮಾನುಗಳು ಅಥವಾ ಸ್ತಂಭಗಳು ಇರುವುದಿಲ್ಲ ಎಂದು ಇಂಡೋ- ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್‍ನ ಸದಸ್ಯರ ಜತೆಗೆ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಿದ ವಾಸ್ತುಶಿಲ್ಪಿ ಎಸ್.ಎಂ.ಅಖ್ತರ್ ಹೇಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧನ್ನಿಪುರ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಆಯತಾಕಾರದ ಸಂಕೀರ್ಣದಲ್ಲಿ ನಿರ್ಮಾಣವಾಗಲಿರುವ ಬಹುಮಹಡಿ ಸಂಕೀರ್ಣದಲ್ಲಿ ಒಂದು ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ ಮತ್ತು ಮ್ಯೂಸಿಯಂ ಇರುತ್ತದೆ. ಇದು ಶತಮಾನದಷ್ಟು ಹಳೆಯ ಸೂಫಿ ಮಂದಿರ ಮತ್ತು ಮಸೀದಿಯಿಂದ ಕೆಲ ಮೀಟರ್‍ಗಳ ದೂರದಲ್ಲಿ ಇರುತ್ತದೆ.
2000 ಮಂದಿಗೆ ನಮಾಜ್ ಸಲ್ಲಿಸಲು ಅವಕಾಶವಾಗುವ ವಿಶಾಲ ಮಸೀದಿಯು ಬಾಬರಿ ಮಸೀದಿಗಿಂತ ನಾಲ್ಕು ಪಟ್ಟು ದೊಡ್ಡದಿರುತ್ತದೆ. 300 ಹಾಸಿಗೆಗಳ ಆಸ್ಪತ್ರೆ ಸಂಕೀರ್ಣ, ವಿಸ್ತೀರ್ಣದಲ್ಲಿ ಮಸೀದಿಯ ಆರು ಪಟ್ಟು ದೊಡ್ಡದಾಗಿರುತ್ತದೆ. ಜಾಗತಿಕ ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಶೂನ್ಯ ಇಂಗಾಲ ಪರಿಕಲ್ಪನೆ ಹೊಂದಲಾಗಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಅಖ್ತರ್ ಹುಸೇನ್ ಹೇಳುತ್ತಾರೆ. ಅಮೆಜಾನ್‍ನ ದಟ್ಟ ಅರಣ್ಯ ಸೇರಿದಂತೆ ವಿಶ್ವದ ವಿವಿಧ ಅರಣ್ಯಗಳಿಂದ ತಂದ ಗಿಡಮರಗಳನ್ನು ವಿಶೇಷವಾಗಿ ಬೆಳೆಸಲಾಗುತ್ತದೆ. ಇದು ಹಸಿರು ಸಂದೇಶದ ಜತೆಗೆ ಶಾಂತಿ, ಸಾಮರಸ್ಯ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು