Sunday, January 19, 2025
ಸುದ್ದಿ

ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಹಾಗೂ ಬ್ಲಡ್ ಡೋನರ್ ಕೇರಳ ಇವರ ಸಂಯೋಜನೆಯಲ್ಲಿ ರಕ್ತದಾನ ಶಿಬಿರ -ಕಹಳೆ ನ್ಯೂಸ್

ಕೊರೋನಾ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಆದ್ರೆ ಈಗ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಾ ಇದ್ದು, ಅಲ್ಲಲ್ಲಿ ರಕ್ತದಾನ ಶಿಬಿರ ಕೂಡ ನಡೆತಾ ಇದೆ.ಈ ಹಿನ್ನಲೆ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಹಾಗೂ ಬ್ಲಡ್ ಡೋನರ್ ಕೇರಳ ಇವರ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಕೊರೋನ ಎಂಬ ಮಹಾಮಾರಿ ಇಂದ ತತ್ತರಿಸುತ್ತಿರುವ ಮಾನವ ಕುಲಕ್ಕೆ ಏನಾದರೂ ಒಳಿತು ಆಗಬೇಕೆಂಬ ಆಶಯದಲ್ಲಿ ಕುವೈಟ್‌ನಲ್ಲಿ ನೆಲೆಸಿರುವ ಭಾರತದ ವಿವಿಧ ಭಾಗದ ಜನರು ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ರಕ್ತದಾನ ದಾನ ಮಾಡಿದ ಎಲ್ಲರಿಗೂ ಭಾರತೀಯ ಪ್ರವಾಸಿ ಪರಿಷತ್ ಕುವೈಟ್, ಕರ್ನಾಟಕ ಧನ್ಯವಾದಗಳನ್ನು ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು