Recent Posts

Sunday, January 19, 2025
ಸಿನಿಮಾ

ಮೆಹೆಂದಿ ಹಾಕಿ ಮದುವೆಗೆ ರೆಡಿಯಾದ ತುಪ್ಪದ ಬೆಡಗಿ ರಾಗಿಣಿ..! – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿಗೆ ಸ್ಯಾಂಡಲ್‍ವುಡ್ ನಲ್ಲಿ ಹಲವು ನಟ-ನಟಿಯರ ಸುದ್ದಿ ಕೇಳಿಬರುತ್ತಿದ್ದು, ಈಗ ತುಪ್ಪದ ಬೆಡಗಿ ರಾಗಿಣಿ ಮಹೆಂದಿ ಹಾಕಿಕೊಂಡು ಮದುವೆಗೆ ಸಿದ್ಧರಾಗಿದ್ದಾರೆ.

ರಾಗಿಣಿ ಇಷ್ಟು ಬೇಗ ಮದುವೆ ಆಗುತ್ತಾರಾ ಎಂದು ಆಶ್ಚರ್ಯ ಪಡಬೇಡಿ. ರಾಗಿಣಿ ತಮ್ಮ ಸ್ನೇಹಿತ ಮೆಹೆಕ್ ಮದುವೆಗೆ ಮೆಹೆಂದಿ ಹಾಕಿಸಿಕೊಂಡು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಸ್ನೇಹಿತನ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಗಿಣಿ ಅವರ ಸ್ನೇಹಿತ ಮೆಹಕ್ ಹಿಮಾಚಲ ಪ್ರದೇಶದಲ್ಲಿದ್ದು, ಅವರ ಮದುವೆಗಾಗಿ ತಮ್ಮ ಬ್ಯೂಸಿ ಶೆಡ್ಯೂಲ್‍ನಲ್ಲೂ ಬಿಡುವು ಮಾಡಿಕೊಂಡಿದ್ದಾರೆ. ಅವರ ಮದುವೆಗೆ ಒಂದು ವಾರ ಇರುವಾಗಲೇ ರಾಗಿಣಿ ಹಿಮಾಚಲ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರಾಗಿಣಿ ಜೊತೆ ಅವರ ಕುಟುಂಬವು ಕೂಡ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ರಾಗಿಣಿ ತನ್ನ ಸ್ನೇಹಿತನ ಮದುವೆಗಾಗಿ ಸಾಕಷ್ಟು ಸಂಭ್ರಮದಲ್ಲಿದ್ದು, ನೀಲಿ ಬಣ್ಣದ ವಸ್ತ್ರವನ್ನು ಧರಿಸಿ ತಮ್ಮ ಗೆಳೆಯನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.