Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಸೌತಡ್ಕ ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ಪ್ರಮಾಣದ‌ ಚಿನ್ನಾಭರಣ, ಹಣ ಲೂಟಿದ ದರೋಡೆಕೋರರು ; ಮನೆಯ ಮಹಿಳೆಗೆ ಚೂರಿಯಿಂದ ದಾಳಿ, ಮಹಿಳೆ ಗಂಭೀರ..! – ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಸೌತಡ್ಕದಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ತಂಡವೊಂದು ಮನೆ ಮಾಲಿಕನನ್ನು ಕಟ್ಟಿಹಾಕಿ ಭಾರೀ ದೊಡ್ಡ ಮಟ್ಟದಲ್ಲಿ ದರೋಡೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪ್ರಸಿದ್ಧ ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪ ಮನೆಯೊಂದಕ್ಕೆ ನುಗ್ಗಿದ ಸುಮಾರು ಒಂಬತ್ತು ಜನರ ತಂಡವೊಂದು ಮನೆ ಮಾಲಿಕನನ್ನು ಕಟ್ಟಿ ಹಾಕಿ, ‌ಮನೆಯ ಮಹಿಳೆಯ ಮೇಲೆ ಚೂರಿಯಿಂದ ದಾಳಿ ಮಾಡಿ, ನಂತರ ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೋಚಿ‌ ಪರಾರಿಯಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೌತಡ್ಕ ದೇವಸ್ಥಾನ ಸಮೀಪ ಇರುವ ತುಕರಪ್ಪ ಶೆಟ್ಟಿ ಎಂಬವರ ಅವರ ಮನೆಯಲ್ಲಿ ಮಧ್ಯರಾತ್ರಿ 12 ರಿಂದ 2 ಗಂಟೆಯ ನಡುವೆ ಈ ಕೃತ್ಯ ನಡೆದಿದ್ದು, ಸುಮಾರು ಒಂಬತ್ತು ಜನರ ತಂಡದಿಂದ ದರೋಡೆ ‌ನಡೆದಿದೆ ಎನ್ನಲಾಗಿದೆ. ಮನೆಯ ಮಾಲಿಕ ತುಕರಪ್ಪ ಶೆಟ್ಟಿ ಅವರನ್ನು ಕಟ್ಟಿ ಹಾಕಿ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು ತಡೆಯಲು ಬಂದ ತುಕಾರಾಮ ಶೆಟ್ಟಿ ಅವರ ಪತ್ನಿ ಗೀತಾ ಶೆಟ್ಟಿ ಅವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ, ಗೀತಾ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು