Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕ್ಯಾನ್ಸ‌ರ್ ಚಿಕಿತ್ಸೆ ಬಳಿಕ ಕೇಶ ಕಳೆದು ಕೊಂಡವರಿಗೆ ” ಕೇಶದಾನ ” ; ‘ ಸೀಡ್ಸ್ ಆಫ್ ಹೋಪ್ ‘ ವಿದ್ಯಾರ್ಥಿ ತಂಡದ ಸಾರಥ್ಯದಲ್ಲಿ 67 ಮಂದಿಯಿಂದ ಕೇಶದಾನ – ಕಹಳೆ ನ್ಯೂಸ್

ಪುತ್ತೂರು: ಮಾರಕ ಕಾಯಿಲೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡ ಬಳಿಕ ಕೇಶನಷ್ಟದ ಸಂಕಷ್ಟವನ್ನು ಅನುಭವಿಸುತ್ತಿರುವ ರೋಗಿಗಳಿಗೆ ವಿಕ್‌ಮೂಲಕ ಕೇಶ ಕೊಡಿಸುವ ಪ್ರಯತ್ನಕ್ಕೆ ಸಂಬಂಧಿಸಿ ಪುತ್ತೂರಿನ ೯ ಮಂದಿ ‘ಸೀಡ್ಸ್ ಆಫ್ ಹೋಪ್’ ತಂಡದ ವಿದ್ಯಾರ್ಥಿಗಳ ತಂಡದ ಸಾರಥ್ಯದಲ್ಲಿ ಡಿ.೨೦ರಂದು ಮುಳಿಯ ಜೆಸಿಐ ಟ್ರೈನಿಂಗ್ ಹಾಲ್‌ನಲ್ಲಿ ಕೇಶ ದಾನ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಅವರ ಪರಿಕಲ್ಪನೆಯಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ನೇಹಾ ಭಟ್, ಅಕ್ಷಯ ಪಾರ್ವತಿ ಸರೋಳಿ, ಸಮರ್ಥರಾಮ ಮುಳಿಯ, ಕೌಶಲ್ ಎಸ್.ವೈ., ಕನ್ಯ ಸಚಿನ್ ಶೆಟ್ಟಿ ಮತ್ತು ಹಿತ ಕಜೆ ಇವರ ತಂಡವು ಮುಳಿಯ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಆರಂಭಗೊಂಡ ಚಿಂತನೆಯಲ್ಲಿ ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಈಸ್ಟ್, ರೋಟರಿ ಪುತ್ತೂರು ಸಿಟಿ, ಜೆಸಿಐ ಪುತ್ತೂರು, ಜೇಸಿರೆಟ್ ಪುತ್ತೂರು, ಇನ್ನರ್ ವ್ಹೀಲ್ ಪುತ್ತೂರು, ಲೇಡೀಸ್ ಬ್ಯೂಟಿ ಅಸೋಸಿಯೇಷನ್ ಹಾಗೂ ಹೇರ್ ಕ್ರೌನ್ ಸಂಸ್ಥೆ ಸೇರಿದಂತೆ ಪುತ್ತೂರಿನ ಒಟ್ಟು ೬ ಸಂಘ ಸಂಸ್ಥೆಗಳು ಕೈ ಜೋಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾನ್ಸರ್ ಸಮಸ್ಯೆಯನ್ನು ಗೆದ್ದಿರುವ ಆದ್ಯ ಅವರ ಶಿಕ್ಷಕಿ ಸಾಧನಾ ಹೆಬ್ಬಾರ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಡಾ.ರಾಜೇಶ್‌ಕೃಷ್ಣ, ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ, ರೋಟರಿ ಪುತ್ತೂರು ಸಿಟಿ ಅಧ್ಯಕ್ಷ ಕೃಷ್ಣಮೋಹನ್ ಪಿ.ಎಸ್, ಇನ್ನರ್‌ವೀಲ್ಹ್ ಅಧ್ಯಕ್ಷೆ ಸೀಮಾ ನಾಗರಾಜ್, ಮಂಗಳೂರು ಲೇಡೀಸ್ ಬ್ಯೂಟಿ ಅಸೋಸಿಯೇಶನ್‌ನ ನಿಶ್ಚಲ ಎಸ್ ಆಳ್ವ, ಜೆಸಿಐಯ ಸ್ವಾತಿ ಜೆ ರೈ ಅತಿಥಿಗಳಾಗಿ ಭಾಗವಹಿಸಿದ್ದರು. ಮುಳಿಯ ಪೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದಭದಲ್ಲಿ ಕೇಶ ದಾನ ಮಾಡಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ಕೇಶದಾನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಳಿಯ ಪೌಂಡೇಶನ್‌ನಿಂದ ಹೇರ್ ಬ್ಯಾಂಕ್
ಕೇಶದಾನ ಮಾಡುವ ಕುರಿತು ಯಾರು ಮುಂದೆ ಬರುತ್ತಾರೋ ಅವರು ಸಂಬಂಧಿಸಿದ ಪಾರ್ಲರ್‌ಗಳ ಮುಳಿಯ ಪೌಂಡೇಶನ್ ಹೇರ್ ಬ್ಯಾಂಕ್ ಮೂಲಕ ಕೇಶದಾನ ಮಾಡಬಹುದು. ನಾವು ಅದನ್ನು ವಿಗ್ ತಯಾರಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಕರ್ನಾಟಕಾದ್ಯಂತ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯನ್ನು ಸಂಪರ್ಕ ಮಾಡಿದ್ದೇವೆ. ಅಲ್ಲಿ ಯಾರು ಬಡ ಕ್ಯಾನ್ಸರ್ ಪೀಡಿತ ರೋಗಿಳಿದ್ದಾರೋ ಅವರಿಗೆ ವಿಗ್ ಕೊಡಿಸುವ ಕೆಲಸ ನಮ್ಮ ಕಡೆಯಿಂದ ಆಗಲಿದೆ. ಹಾಗಾಗಿ ಮುಳಿಯ ಫೌಂಡೇಶ್‌ನಿಂದ ಹೇರ್ ಬ್ಯಾಂಕ್ ತೆರೆಯಲಿದ್ದೇವೆ ಎಂದು ಮುಳಿಯ ಕೇಶವ ಪ್ರಸಾದ್ ಘೋಷಣೆ ಮಾಡಿದರು.