Saturday, November 23, 2024
ಸುದ್ದಿ

ನೇತ್ರಾವತಿ ನದಿಯ ಸೇತುವೆಗೆ ಬೇಲಿ ಹಾಕಿದರೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ – ಕಹಳೆ ನ್ಯೂಸ್

ಕೋಟೆಕಾರಿನ ಮಾಡೂರು ನಿವಾಸಿ ಶಾರದಾ ಗಟ್ಟಿ (68) ಆತ್ಮಹತ್ಯೆಗೈದ ದುರ್ದೈವಿ. ಶಾರದಾ ಗಟ್ಟಿ ಅವರು ಮೂಲತಃ ಉಚ್ಚಿಲದ ಸಂಗೊಳಿಗೆ ನಿವಾಸಿಯಾಗಿದ್ದರು. ಸಂಗೊಳಿಗೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರ ಹೊಟೇಲ್ ಶಾರದಕ್ಕನ ಹೊಟೇಲ್ ಎಂದು ಪ್ರಸಿದ್ದಿ ಪಡೆದಿತ್ತು.


ಮಾಡೂರಿನಲ್ಲಿರುವ ಮಗಳ ಮನೆಯಲ್ಲಿ ನೆಲೆಸಿದ್ದರೆನ್ನಲಾಗಿದೆ. ಕಳೆದ ಡಿ.15 ರಂದು ಉಚ್ಚಿಲ ಸಂಕೋಳಿಗೆಯ ತರವಾಡಿನ ಮನೆಗೆ ಸಂಕ್ರಾತಿ ಪೂಜೆಗೆ ತೆರಳಿದ್ದ ಶಾರದ ಅವರು ನಾಪತ್ತೆಯಾಗಿದ್ದರು. ಮನೆ ಮಂದಿ ಶಾರದ ಅವರು ಬೇರೆ ಮಕ್ಕಳ ಮನೆಗೆ ತೆರಳಿದ್ದಾರೆ ಎಂದು ಸುಮ್ಮನಿದ್ದರು. ಇವತ್ತು ಕೂಡ ಶಾರದ ಅವರು ಮನೆಗೆ ಹಿಂದಿರುಗದ ಹಿನ್ನಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದೇ ವೇಳೆ, ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಅನಾಥ ವೃದ್ಧೆಯ ಶವ ಇರುವುದಾಗಿ ತಿಳಿಸಿದ್ದು ವಿಚಾರಿಸಿದಾಗ ಅದು ಶಾರದಾ ಗಟ್ಟಿ ಮೃತದೇಹವೆಂದು ತಿಳಿದುಬಂದಿದೆ. ಅವರ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಅಪರಿಚಿತ ವೃದ್ಧೆಯ ಶವವೊಂದು ಪತ್ತೆಯಾಗಿದ್ದು ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅದೇ ಈಗ ಶಾರದ ಗಟ್ಟಿಯವರದ್ದು ಎಂದು ಖಾತ್ರಿಯಾಗಿದ್ದು, ಸೇತುವೆಗೆ ಬೇಲಿ ಹಾಕಿದರೂ ನೇತ್ರಾವತಿಗೆ ಹಾರಿ ಪ್ರಾಣ ಬಿಡುವವರ ಸರಣಿ ಮಾತ್ರ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು