Recent Posts

Monday, January 20, 2025
ಸುದ್ದಿಹೆಚ್ಚಿನ ಸುದ್ದಿ

ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ- ಕಹಳೆ ನ್ಯೂಸ್

ಪುತ್ತೂರು: ಚಿಕ್ಕಮುಡ್ನೂರು 2019-20 ನೇ ಸಾಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯು ಡಿಸೆಂಬರ್ 19 ರಂದು ಸಂಘದ ಆವರಣದಲ್ಲಿ ಸುಂದರ ಪೂಜಾರಿ ಬಡಾವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಕ್ತ ಸಾಲಿನಲ್ಲಿ 7,70,896ರೂ. ಲಾಭಗಳಿಸಿದ್ದು, ಪ್ರತಿ ಲೀಟರ್ ಹಾಲಿಗೆ 1.27 ಪೈಸೆ ಬೋನಸ್ ಮತ್ತು 20% ಡಿವಿಡೆಂಟ್ ನೀಡಲಾಗುವುದೆಂದು ತೀರ್ಮಾನಿಸಲಾಗಿದ್ದು, 287935 ಲೀಟರ್ ಹಾಲು ಖರೀದಿ ಮಾಡಲಾಗಿದೆ.ಹಾಗೆ ಹೊಸ 25 ಸದಸ್ಯರು ಸೇರಿದಂತೆ 335 ಮಂದಿ ಸದಸ್ಯರನ್ನೊಳಗೊಂಡಿದೆ. ಮತ್ತು 68150 ರೂ. ಪಾಲು ಬಂಡವಾಳವನ್ನು ಹೊಂದಿದ್ದು, ಸಂಘ ” ಎ” ಶ್ರೇಣಿಯನ್ನು ಪಡೆದುಕೊಂಡಿದೆ.

ಹಾಗೆಯೇ ಸಂಘಕ್ಕೆ ಕಟ್ಟಡ ನಿರ್ಮಾಣದ ಸಲುವಾಗಿ ಜಾಗ ಖರೀದಿ ಚಿಂತನೆ ನಡೆಯುತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಈ ಸಂದರ್ಭದಲ್ಲಿ ಸಂಘದಲ್ಲಿ ತಮ್ಮ ಸ್ವಂತ ಶ್ರಮದಿಂದಲೇ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಮೋನಪ್ಪ ಗೌಡ , ನಾರಾಯಣ ರೈ, ಮತ್ತು ಸುದರ್ಶನ್ ಇವರುಗಳನ್ನು ಸಂಘದ ಪರವಾಗಿ ಅಧ್ಯಕ್ಷ ಸುಂದರ ಪೂಜಾರಿ , ಉಪಾಧ್ಯಕ್ಷ ಸುರೇಶ್ ಬಿ.ಯು ಮತ್ತು ಎಲ್ಲಾ ಸಿಬ್ಬಂದಿಗಳು ಸೇರಿ ಸನ್ಮಾನಿಸಿದರು.ಹಾಗೆ ದಕ್ಷಿಣ ಕನ್ನಡ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಸದಸ್ಯರ ತೊಂದರೆಗಳನ್ನು ಆಲಿಸಿ ಸೂಕ್ತ ಸಲಹೆಗಳನ್ನು ‌ನೀಡಿದರು.ಹಾಗೂ ಸೊಸೈಟಿ ಕಾರ್ಯದರ್ಶಿ ಅನುರಾಧ ‌ವರದಿ ವಾಚಿಸಿ, ಉಪಾಧ್ಯಕ್ಷ ಸುರೇಶ್ ಬಿ ಸ್ವಾಗತಿಸಿದರು. ಮತ್ತು ಸದಸ್ಯರಾದ ಚಿದಾನಂದ ಬಿ ಆರ್ ವಂದಿಸಿದರು.