ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಭಾಷಣ ಮುಗಿಯುವರೆಗೆ ಮನೆಯಲ್ಲಿ ತಟ್ಟೆ ಬಾರಿಸಿ; ಭಾರತೀಯ ಕಿಸಾನ್ ಯೂನಿಯನ್ ಜಗಜಿತ್ ಸಿಂಗ್ – ಕಹಳೆ ನ್ಯೂಸ್
ನವದೆಹಲಿ:ಡಿಸೆಂಬರ್ 27 ರಂದು “ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮವಾದ ಮನ್ ಕೀ ಬಾತ್ ನಡೆಯಲಿದೆ.
ಈ ವೇಳೆ ಅವರ ಭಾಷಣ ಮುಗಿಯುವ ತನಕ ಊಟದ ತಟ್ಟೆಯನ್ನು ಹಿಡಿದು ಬಾರಿಸಬೇಕು” ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಜಗಜಿತ್ ಸಿಂಗ್ ಹೇಳಿದ್ದಾರೆ. ಹಾಗೆ “ಡಿಸೆಂಬರ್ 25 ರಿಂದ 27 ರವರೆಗೆ ಹರಿಯಾಣದ ಟೋಲ್ ಪ್ಲಾಝಾದಲ್ಲಿ ಮುತ್ತಿಗೆ ಹಾಕಲು ತೀರ್ಮಾನ ಕೈಗೊಂಡಿದ್ದೇವೆ. ಮತ್ತು ಡಿಸೆಂಬರ್ 23 ರಂದು ಕಿಸಾನ್ ದಿವಸವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ, ಈ ಬಾರಿ ಕಿಸಾನ್ ದಿವಸವನ್ನು ಆಚರಣೆ ಮಾಡದಿರಲು ತೀರ್ಮಾನ ಮಾಡಲಾಗಿದೆ” ಎಂದು ಯೂನಿಯನ್ ಹೇಳಿದೆ. “ನಾವು ನಾಳೆ ಒಂದು ದಿನ ರೈತರಿಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ಹಾಗೂ ರೈತರ ಪ್ರತಿಭಟನೆಯು ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲೆಲ್ಲಾ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ” ಎಂದು ಸ್ವಾರಾಜ್ ಇಂಡಿಯಾ ಪಕ್ಷದ ನಾಯಕ ಯೋಗೆಂದ್ರ ಯಾದವ್ ಅವರು ತಿಳಿಸಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರು ಕೊರೊನಾ ವೇಳೆ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದ್ದ ಸಂದರ್ಭದಲ್ಲಿ ವೈದ್ಯರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದ ನಾಗರಿಕರು ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯಬೇಕು ಮತ್ತು ತಟ್ಟೆಯಿಂದ ಶಬ್ಧ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದ್ದರು.