Monday, January 20, 2025
ಸುದ್ದಿ

ಮಂಗಳೂರು : 2020 ನೇ ಸಾಲಿನ `ಯಕ್ಷಗಾನ ಅಕಾಡೆಮಿ ಪ್ರಶಸ್ತಿ’ ಪ್ರಕಟ : ಶ್ರೀಧರ್ ಡಿ.ಎಸ್.ಗೆ ಪಾರ್ತಿಸುಬ್ಬ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2020 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪಟ್ಟಿ ಬಿಡುಗಡೆಯಾಗಿದೆ.

ಯಕ್ಷರಂಗದ ವಿವಿಧ ವಿಭಾಗಗಳಲ್ಲಿ ಉತ್ತಮ ಸೇವೆ ಮಾಡಿದ ಗೌರವಾನ್ವಿತರಿಗೆ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾರ್ತಿಸುಬ್ಬ ಪ್ರಶಸ್ತಿ- ಶ್ರೀಧರ್ ಡಿ.ಎಸ್, ಗೌರವ ಪ್ರಶಸ್ತಿ- ಬಿ. ಸಂಜೀವ್ ಸುವರ್ಣ, ಕೆ. ತಿಮ್ಮಪ್ಪ ಗುಜರನ್ (ಮರಣೋತ್ತರ), ಡಾ. ವಿಜಯ ನಳಿನಿ ರಮೇಶ್, ಡಾ. ಚಕ್ಕರೆ ಶಿವಶಂಕರ್, ಬಿ. ಪರಶುರಾಮ್ , ಯಕ್ಷಸಿರಿ ವಾರ್ಷಿಕ ಪ್ರಶಸ್ತಿ-ತೀರ್ಥಹಳ್ಳಿ ಗೋಪಾಲ ಆಚಾರ್ಯ, ಬೇಲ್ತೂರು ರಮೇಶ್, ಆವರ್ಸೆ ಶ್ರೀನಿವಾಸ ಮಡಿವಾಳ, ಹರಿನಾರಾಯಣ ಬೈಪಡಿತ್ತಾಯ, ಸಂಜಯ್ ಕುಮಾರ್ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೊಡ, ಸುಬ್ರಹ್ಮಣ್ಯ ದಾರೇಶ್ವರ, ವಿಟ್ಲಶಂಭು ಶರ್ಮ, ಹನುಮಂತರಾಯಪ್ಪ, ಎ.ಎಂ. ಮಳವಾಲಗಪ್ಪ.