Sunday, November 24, 2024
ಹೆಚ್ಚಿನ ಸುದ್ದಿ

ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್​ಒ – ಕಹಳೆ ನ್ಯೂಸ್

ಜಿನೀವಾ : ಬ್ರಿಟನ್​ನಲ್ಲಿ ಹೆಚ್ಚಿನ ಪ್ರಸರಣ ದರದೊಂದಿಗೆ ಪತ್ತೆಯಾಗಿರುವ ಹೊಸ ರೂಪಾಂತರ ಕರೊನಾ ವೈರಸ್​ ಇನ್ನು ಮಿತಿ ಮೀರಿಲ್ಲ ಮತ್ತು ಸದ್ಯ ಅನುಸರಿಸುತ್ತಿರುವ ಕ್ರಮಗಳೊಂದಿಗೆ ವೈರಸ್​ ಅನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸೋಮವಾರ ಸ್ಪಷ್ಟನೆ ನೀಡಿದೆ.

ಈ ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿ ನಾವು ಹೆಚ್ಚು ಸೋಂಕಿನ ಪ್ರಮಾಣ ಹೊಂದಿದ್ದು, ವೈರಸ್​ ಅನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಸದ್ಯ ವೈರಸ್​ ಕೈಮೀರಿದೆ ಎಂಬ ಪರಿಸ್ಥಿತಿ ಇಲ್ಲ ಎಂದು ಡಬ್ಲ್ಯುಎಚ್​ಒ ತುರ್ತು ಪರಿಸ್ಥಿತಿ ಮುಖ್ಯಸ್ಥ ಮೈಕೆಲ್​ ರಯಾನ್​ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಬ್ರಿಟಿಷ್​ ಆರೋಗ್ಯ ಕಾರ್ಯದರ್ಶಿ ಮ್ಯಾಟ್​ ಹ್ಯಾನ್​ಕಾಕ್​, ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿದ್ದು, ಗರಿಷ್ಠ 70ಕ್ಕಿಂತ ಹೆಚ್ಚು ಪ್ರಸರಣ ದರವನ್ನು ಹೊಂದಿದೆ ಎಂದು ಹೇಳಿದ್ದರು.
ವೈರಸ್​ ವಿರುದ್ಧ ಪ್ರಸ್ತುತ ನಾವು ಅನುಸರಿಸುತ್ತಿರುವ ಉಪಕ್ರಮಗಳು ಸರಿಯಾಗಿವೇ ಇವೆ ಎಂದಿರುವ ರಯಾನ್​, ಸದ್ಯ ನಾವು ಏನು ಮಾಡುತ್ತಿದ್ದೇವೋ ಅದನ್ನು ಹಾಗೇ ಮತ್ತಷ್ಟು ಗಂಭೀರತೆಯಿಂದ ಅನುಸರಿಬೇಕು. ಹೀಗೆ ಮಾಡುವುದರಿಂದ ವೈರಸ್​ ಅನ್ನು ಮತ್ತೆ ನಿಯಂತ್ರಣಕ್ಕೆ ತರಬಹುದೆಂದು ರಯಾನ್​ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈರಸ್​ ಮತ್ತಷ್ಟು ಹರಡಬಾರದು ಎಂದ ರಕ್ಷಣಾ ದೃಷ್ಟಿಯಿಂದ ಸದ್ಯ ಬ್ರಿಟನ್​ ಅಥವಾ ದಕ್ಷಿಣಾ ಆಫ್ರಿಕಾಗೆ ಪ್ರಯಾಣ ಬೆಳೆಸುವುದನ್ನು ಸುಮಾರು 30 ರಾಷ್ಟ್ರಗಳು ರದ್ದು ಮಾಡಿವೆ.
ತುಂಬಾ ಎಚ್ಚರಿಕೆ ವಹಿಸಿದ್ದೇವೆ. ವೈರಸ್ ಹರಡುವಲ್ಲಿ ಸ್ವಲ್ಪ ಹೆಚ್ಚು ಪರಿಣಾಮಕಾರಿಯಾಗಿದ್ದರೂ ಸಹ, ವೈರಸ್ ಅನ್ನು ನಿಲ್ಲಿಸಬಹುದು ಎಂದು ರಯಾನ್​ ಅವರು ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು