Recent Posts

Monday, January 20, 2025
ಹೆಚ್ಚಿನ ಸುದ್ದಿ

ಕರುನಾಡಿಗೆ ಕಾಲಿಟ್ಟಿದೆಯಾ ‘ಕೊರೋನಾ ಹೊಸ ತಳಿ’.? : ರಾಜ್ಯ ಆರೋಗ್ಯ ಇಲಾಖೆಯಿಂದ ‘ಹೈ ಅಲರ್ಟ್’.! – ಕಹಳೆ ನ್ಯೂಸ್

ಬೆಂಗಳೂರು : ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವಂತ ಹೊಸ ಕೊರೋನಾ ವೈರಸ್ ತಳಿ, ಭಾರತಕ್ಕೂ ಕಾಲಿಟ್ಟು, ಕರುನಾಡಿಕೂ ಕಾಲಿಟ್ಟಿದ್ಯಾ ಎಂಬ ಆತಂಕ ರಾಜ್ಯದಲ್ಲಿ ಶುರುವಾಗಿದೆ. ಇದೇ ಕಾರಣದಿಂದಾಗಿ ಹೈ ಅಲರ್ಟ್ ಆಗಿರುವಂತ ರಾಜ್ಯ ಆರೋಗ್ಯ ಇಲಾಖೆ, ಇಂಗ್ಲೆಂಡ್ ನಿಂದ ಬಂದ 138 ಮಂದಿ ಪ್ರಯಾಣಿಕರ ಪತ್ತೆಗಾಗಿ ಆಪರೇಷನ್ ಶುರು ಮಾಡಿದೆ.

ಕಳೆದ ಇತ್ತೀಚೆಗೆ ಯುಕೆಯಿಂದ 138 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಕೊರೋನಾ ಹೊಸ ತಳಿಯ ಪರೀಕ್ಷೆ ಮಾಡಿಸದೇ ಬೆಂಗಳೂರು ಮೂಲಕ ರಾಜ್ಯಕ್ಕೆ ಆಗಮಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಅವರ ಕಾಂಟ್ಯಾಕ್ಟ್ ಮಾಹಿತಿಯನ್ನು ಪಡೆಯುತ್ತಿರುವಂತ ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆಗೂಡಿ, ಅವರ ಪತ್ತೆಗೆ ಇಳಿದಿದೆ. ಈಗಾಗಲೇ ಆರೋಗ್ಯ ಇಲಾಖೆಯು ಹೊಸ ಕೊರೋನಾ ತಳಿಯ ಬಗ್ಗೆ ಜಾಗ್ರತೆ ವಹಿಸಿದ್ದು, ವಿದೇಶದಿಂದ ರಾಜ್ಯಕ್ಕೆ ಮರಳುತ್ತಿರುವಂತ ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಆರ್ ಟಿ-ಪಿಸಿಆರ್ ಮೂಲಕ ಸ್ಯಾಂಪಲ್ ಸಂಗ್ರಹಿಸಿ, ನಿಮ್ಹಾನ್ಸ್ ನಲ್ಲಿರುವಂತ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲದೇ ವಿದೇಶದಿಂದ ಬಂದ ಪ್ರಯಾಣಿಕರನ್ನು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆಯೂ ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ ಬ್ರಿಟನ್ ನಿಂದ ರಾಜ್ಯಕ್ಕೆ ನಿನ್ನೆಯವರೆಗೆ 537 ಜನರು ಬಂದಿದ್ದಾರೆ. ಟೆಸ್ಟ್ ಮಾಡಿಸದೇ ಬಂದವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿರುವಂತ ಆರೋಗ್ಯ ಇಲಾಖೆ, ಯುಕೆಯಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿದೆ. ಕಳೆದ ನಿನ್ನೆಯಿಂದಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿಗರ ತಪಾಸಣೆಗಾಗಿ ಲ್ಯಾಬ್ ರೆಡಿ ಮಾಡಲಾಗಿದೆ. ಇಂತಹ ಲ್ಯಾಬ್ ನಲ್ಲಿ ವಿದೇಶದಿಂದ ಬಂದವರ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು