Recent Posts

Sunday, January 19, 2025
ಬೆಂಗಳೂರು

ಜನವರಿ 8 ರಂದು ಕೆಜಿಎಫ್-ಚಾಪ್ಟರ್ 2 ಸಿನೆಮಾದ ಟೀಸರ್ ಬಿಡುಗಡೆ-ಕಹಳೆ ನ್ಯೂಸ್

ಬೆಂಗಳೂರು:ಜನವರಿ 8ರಂದು ಬಹುನಿರೀಕ್ಷಿತ ಕೆಜಿಎಫ್– ಚಾಪ್ಟರ್ 2 ಸಿನಿಮಾದ ಟೀಸರ್‌ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ “ಸಾಮ್ರಾಜ್ಯದತ್ತ ಒಂದು ನೋಟ, ಇದಕ್ಕಾಗಿ ಒಂದು ವರ್ಷ ತಡವಾಗಿರಬಹುದು. ಆದರೆ ನಾವು ಇನ್ನಷ್ಟು ಸೃದಢರಾಗಿ, ಬಲಿಶಾಲಿ ಬಂದಿದ್ದೇವೆ. ನನ್ನ ಕೈಯಲ್ಲಿ ಒಂದು ಅತ್ಯುತ್ತಮ ತಂಡ ಇರುವಾಗ ಚಿತ್ರೀಕರಣ ಪೂರ್ಣಗೊಳಿಸುವುದು ಯಾವುದೂ ಕಷ್ಟ ಎನ್ನಿಸಲಿಲ್ಲ. ಸಂಜಯ್‌ ದತ್ ನಿಜ ಜೀವನದಲ್ಲೂ ಹೋರಾಟಗಾರ. ಯಶ್‌ ಮೊದಲಿನಂತೆ ಕೆಲಸದಲ್ಲಿ ಸದಾ ಹುಮ್ಮಸ್ಸಿನ ವ್ಯಕ್ತಿ. ಕೆಜಿಎಫ್‌–ಚಾಪ್ಟರ್‌ 2 ಅನ್ನು ಜಗತ್ತಿಗೆ ತೋರಿಸಲು ಉತ್ಸುಕನಾಗಿದ್ದೇನೆ” ಎಂದು ಈ ಕುರಿತು ಟ್ವೀಟ್ ಮಾಡಿದ್ದಾರೆ. ಇನ್ನು ಕೊರೊನಾದಿಂದ ಪ್ರಶಾಂತ್ ನೀಲ್ ಅವರು ಶೂಟಿಂಗ್ ಮುಂದಕ್ಕೆ ಹಾಕಿದ್ದು ಇದೀಗ ಮತ್ತೆ ಆರಂಭಗೊಂಡು ನಿನ್ನೆ ಹೈದರಾಬಾದ್‌ನಲ್ಲಿ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.