Recent Posts

Sunday, January 19, 2025
ಬಂಟ್ವಾಳ

ಬಂಟ್ವಾಳದಲ್ಲಿ ಉತ್ತಮ ಮತದಾನ; ಶೇ.77.7 ಮಂದಿ ಹಕ್ಕು ಚಲಾವಣೆ -ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತಿಗಳ 822 ಸ್ಥಾನಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಶೇ.77.7 ಮತದಾನವಾಗಿದೆ.ನಿನ್ನೆ ಸಂಜೆ ಚುನಾವಣಾ ಶಾಖೆಯ ಕಂಟ್ರೋಲ್ ರೂಮ್ ನೀಡಿದ ಮಾಹಿತಿ ಪ್ರಕಾರ, ಒಟ್ಟು 2,77,133 ಮತದಾರರ ಪೈಕಿ 2,15,535 ಮಂದಿ ಮತ ಚಲಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರಲ್ಲಿ 1,04,156 ಪುರುಷರು, 1,11,376 ಮಹಿಳೆಯರು ಮತ್ತು 3 ಇತರರು. ಮತದಾನ ಪೂರ್ಣಗೊಂಡ ಕೂಡಲೇ ಮತಪೆಟ್ಟಿಗೆಗಳನ್ನು ಭದ್ರಪಡಿಸಿ, ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿರುವ ಮೂರು ಸ್ಟ್ರಾಂಗ್ ರೂಮ್ ಗಳಿಗೆ ತರಲಾಗಿದೆ. ಮಂಗಳೂರು ಸಹಾಯಕ ಕಮೀಷನರ್ ಮದನ್‌ಮೋಹನ್ ಸಿ, ತಹಶೀಲ್ದಾರ್ ಅನಿತಾಲಕ್ಷ್ಮೀ, ತಾ.ಪಂ.ಇಒ ರಾಜಣ್ಣ, ವಿವಿಧ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಲವು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಗಳ ಉಸ್ತುವಾರಿ ಗಮನಿಸಿದರು. ಇಡೀ ದಿನ ಮತದಾನ ಶಾಂತಿಯುತವಾಗಿದ್ದು, ಪೊಲೀಸ್ ಇಲಾಖಾಧಿಕಾರಿಗಳು ಯಶಸ್ವಿಯಾಗಿ ಬಂದೋಬಸ್ತ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು