Saturday, November 23, 2024
ಹೆಚ್ಚಿನ ಸುದ್ದಿ

“ಶೀಘ್ರವೇ ಪ್ರತಿಭಟನಾ ನಿರತ ರೈತರು ಪುನಃ ಮಾತುಕತೆಗೆ ಬರುವ ಭರವಸೆ ಇದೆ “- ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ – ಕಹಳೆ ನ್ಯೂಸ್

ನವದೆಹಲಿ :ಕೇಂದ್ರ ಕೃಷಿ ಸಚಿವ ನರೇಂದ್ರ ‌ ಸಿಂಗ್‌ ತೋಮರ್‌ ಅವರು “ಶೀಘ್ರವೇ ಪ್ರತಿಭಟನಾ ನಿರತ ರೈತರು ಪುನಃ ಮಾತುಕತೆಗೆ ಬರುವ ಭರವಸೆ ಇದೆ” ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ ಮತ್ತು ಉತ್ತರಪ್ರದೇಶದ ರೈತಪರ ಸಂಘಟನೆಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, “ಭೇಟಿ ಮಾಡಲು ಬಂದಿದ್ದ ಕೆಲವು ರೈತ ಸಂಘಟನೆಗಳು, ಸರ್ಕಾರ ಜಾರಿಗೆ ತಂದ ಕಾನೂನುಗಳು ಉತ್ತಮವಾಗಿದೆ. ಅಲ್ಲದೇ, ಈ ಕಾನೂನು ಮುಂದುವರೆಯ ಬೇಕು. ಕಾನೂನುಗಳಿಗೆ ಯಾವುದೇ ರೀತಿಯಾದ ತಿದ್ದುಪಡಿ ಮಾಡದಂತೆ ಒತ್ತಾಯಿಸಲು ಆಗಮಿಸಿದ್ದರು” ಎಂದಿದ್ದಾರೆ. “ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳು ಶೀಘ್ರದಲ್ಲೇ ಪುನಃ ಮಾತುಕತೆಗೆ ಬರುತ್ತಾರೆ ಎನ್ನುವ ಭರವಸೆ ಇದೆ. ಈ ವಿಚಾರವಾಗಿ ಪರಸ್ಪರ ಚರ್ಚೆ ನಡೆಸಿ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯ” ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು