ಉಡುಪಿ:ಉಡುಪಿ ಜಿಲ್ಲೆಗೆ ಬ್ರಿಟನ್ ನಿಂದ ಎಂಟು ಮಂದಿ ಆಗಮಿಸಿದ್ದರಿಂದ ಉಡುಪಿಗೆ ಬ್ರಿಟನ್ ವೈರಸ್ ಭೀತಿ ಕಾಡಿತ್ತು.
ಆದರೆ ಇದೀಗ ಆ ಎಂಟು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇದರಿಂದ ಉಡುಪಿ ಜಿಲ್ಲೆಯ ಜನತೆಯ ಆತಂಕ ದೂರಾಗಿದೆ. ಇಂಗ್ಲೆಂಡ್ ನಿಂದ ಡಿಸೆಂಬರ್ 21 ರಂದು ಎಂಟು ಮಂದಿ ಜಿಲ್ಲೆಗೆ ಬಂದಿದ್ದರು. ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8 ಮಂದಿ ಆಗಮಿಸಿದ್ದರು. ಇದರಿಂದ ಜಿಲ್ಲಾಯಾದ್ಯಂತ ಬ್ರಿಟನ್ ವೈರಸ್ ಹರಡುವ ಭೀತಿ ಎದುರಾಗಿತ್ತು. ಆದರೆ ಎಲ್ಲರ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ಇಂದು ಬಂದಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಆದ್ದರಿಂದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ. ಆದರೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಅವರು ಎಂಟು ಮಂದಿಯ ವರದಿ ನೆಗೆಟಿವ್ ಬಂದರೂ ಅವರ ಹೋಮ್ ಕ್ವಾರಂಟೈನ್ ಅವಧಿ ಮುಂದುವರಿಯಲಿದ್ದು, 7 ದಿನಗಳ ಬಳಿಕ ಮತ್ತೆ ಗಂಟಲ ದ್ರವದ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.