ಭಾರತವನ್ನು ವೈಜ್ಞಾನಿಕ ಕಲಿಕೆಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಕ್ರಮಕೈಗೊಳ್ಳುತ್ತಿದೆ; ಪ್ರಧಾನಿ ನರೇಂದ್ರ ಮೋದಿ-ಕಹಳೆ ನ್ಯೂಸ್
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು “ಭಾರತವನ್ನು ವೈಜ್ಞಾನಿಕ ಕಲಿಕೆಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ” ಎಂದು ಹೇಳಿದ್ದಾರೆ.
ಮೋದಿ ಅವರು “ಭಾರತವು, ವಿಶ್ವ ದರ್ಜೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ಸಾಧಿಸಲು ಅವಶ್ಯವಿರುವಂತ ದತ್ತಾಂಶ, ಜನಸಂಖ್ಯೆ, ಬೇಡಿಕೆ ಹಾಗೂ ಪ್ರಜಾಪ್ರಭುತ್ವವನ್ನು ಹೊಂದಿದೆ” ಎಂದು ಭಾರತ ಅಂತರಾಷ್ಟ್ರೀಯ ವಿಜ್ಞಾನೋತ್ಸವ 2020ರ ಉದ್ಘಾಟನಾ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗೆ “ಭಾರತವು ವಿಜ್ಞಾನ-ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಯಾವುದೇ ಸವಾಲನ್ನು ಎದುರಿಸಲು ಮತ್ತು ಸಂಶೋಧನಾ ವಾತಾವರಣವನ್ನು ಸುಧಾರಿಸಲು ಭಾರತ ಸರ್ಕಾರ ಸಿದ್ದವಾಗಿದೆ” ಎಂದು ಹೇಳಿದ್ದಾರೆ. “ಎಲ್ಲದಕ್ಕಿಂತ ಪ್ರಮುಖವಾಗಿ ಭಾರತ, ಎಲ್ಲವನ್ನು ಸಮತೋಲನಗೊಳಿಸಲು ಮತ್ತು ರಕ್ಷಣೆ ಮಾಡಲು ಸದೃಢವಾದ ಪ್ರಜಾಪ್ರಭುತ್ವವನ್ನು ಹೊಂದಿದೆ. ಈ ಕಾರಣದಿಂದ ಭಾರತದ ಮೇಲೆ ವಿಶ್ವ ಭರವಸೆಯಿರಿಸಿದೆ” ಎಂದು ತಿಳಿಸಿದ್ದಾರೆ.