ನವದೆಹಲಿ – ಮುಂದಿನ ವರ್ಷದಿಂದ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ. ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾಗುವ ದರವನ್ನು ಗ್ರಾಹಕರು ನೀಡಬೇಕಿದೆ.
ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪೆನಿಗಳು ತಿಂಗಳು ಪೂರ್ತಿಯಾಗಿ ಭರಿಸಬೇಕಿದೆ.
ಹಾಗಾಗಿ ಇಂತಹ ಮಹತ್ವದ ಬದಲಾವಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಏರಿಳಿಕೆಯಾಗುತ್ತಿದೆ. ಅದನ್ನು ದರ ಏರಿಕೆ ಅಥವಾ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಇನ್ನೂ ಮುಂದೆ ಪ್ರತಿವಾರವೂ ಗ್ಯಾಸ್ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ. ಪೆಟ್ರೋಲ್, ಡಿಸೇಲ್ ದರವನ್ನು ಪ್ರತಿದಿನ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಗೆ ಬಂದ ಬಳಿಕ ಬಹುತೇಕ ದರ ದುಪ್ಪಟ್ಟು ಏರಿಕೆಯಾಗಿದೆ. ಡಿಲರ್ ಕಮಿಷನ್ ಮತ್ತು ಅಬಕಾರಿ ಸುಂಕ ಸೇರ್ಪಡೆಯಾಗಿರುವುದರಿಂದ ಪೆಟ್ರೋಲ್ ಡಿಸೇಲ್ ದರ ಕಡಿಮೆಯಾಗುತ್ತಿಲ್ಲ.
ವಾಹನ ಸವಾರರು ಪ್ರತಿ ದಿನ ಟೆನ್ಷನ್ ಅನುಭವಿಸಿದಂತೆ, ಮುಂದಿನ ವರ್ಷದಿಂದ ಅಡುಗೆ ಸೇರಿದಂತೆ ಇತರೆ ಉದ್ದೇಶಗಳಿಗೆ ಗ್ಯಾಸ್ ಬಳಕೆ ಮಾಡುತ್ತಿರುವವರು ಪ್ರತಿ ವಾರವೂ ಟೆನ್ಷನ್ ಅನುಭವಿಸಬೇಕಿದೆ.