Sunday, January 19, 2025
ಸುದ್ದಿ

ನರ ದೌರ್ಬಲ್ಯ ಕಾಯಿಲೆಯಿಂದ ಮೃತಪಟ್ಟಿರುವ ಭಾಸ್ಕರ ಎಂಬವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವನ್ನು ನೀಡಿದ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಕಸಬ ಗ್ರಾಮದ ರಾಘವೇಂದ್ರ ಮಠದ ಬಳಿಯ ನಿವಾಸಿ ಭಾಸ್ಕರ ಎಂಬವರು ನರ ದೌರ್ಬಲ್ಯ ಕಾಯಿಲೆಗೆ ತುತ್ತಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗೆ ಮೃತಪಟ್ಟಿರುತ್ತಾರೆ. ಇವರ ಮನೆಯ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗಿದ್ದು, ಈ ವಿಚಾರವನ್ನು ತಿಳಿದ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಮೃತರ ಮನೆಗೆ ಭೇಟಿ ನೀಡಿ ಮನೆಯ ಸದಸ್ಯರಿಗೆ ಆರ್ಥಿಕ ನೆರವನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ,ಬಿಜೆಪಿ ಪುತ್ತೂರು ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ರಾಜಾರಾವi ಶೆಟ್ಟಿ ಕೋಲ್ಪೆಗುತ್ತು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು