Thursday, January 23, 2025
ಬೆಳ್ತಂಗಡಿ

ಸೌತಡ್ಕ ನೂಜೆ ತುಕ್ರಪ್ಪ ಶೆಟ್ಟಿ ಮನೆ ದರೋಡೆ ಪ್ರಕರಣ ; ದರೋಡೆಕೋರರಿಗೆ ವರವಾದ ಗ್ರಾಮ ಪಂಚಾಯತ್ ಚುನಾವಣೆ – ಕಹಳೆ ನ್ಯೂಸ್

ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ನಾಯಕ ನೂಜೆ ತುಕ್ರಪ್ಪ ಶೆಟ್ಟಿ ಅವರ ನಿವಾಸದಲ್ಲಿ ನಡೆದ ದರೋಡೆ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 400 ಗ್ರಾಂ ಮತ್ತು 1,50,000 ರೂ.ಗಳ ನಗದು ಚಿನ್ನದ ಆಭರಣಗಳನ್ನು ದೋಚಿರುವ ದರೋಡೆಕೋರರು ತುಕ್ರಪ್ಪ ಶೆಟ್ಟಿಯವರನ್ನು ಕಟ್ಟಿಹಾಕಿದ್ದಲ್ಲದೆ ಅವರ ಪತ್ನಿಗೆ ಚೂರಿಯಿಂದ ಇರಿದಿದ್ದರು, ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು. ಅವರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಅಂದಾಜಿಸಲಾಗಿದ್ದು, ಅವರು ದೋಚಿದ ಬಳಿಕ ಮನೆಯಿಂದ ವಾಪಾಸ್‌ ತೆರಳುವಾಗ ಓರ್ವ ದರೋಡೆಕೋರ ತುಕ್ರಪ್ಪ ಶೆಟ್ಟಿಯವರ ಮಗುವನ್ನು ಎತ್ತಲು ಹೋಗಿದ್ದು, ಆ ಸಂದರ್ಭದಲ್ಲಿ ಆತನ ಮುಖಕ್ಕೆ ಮುಚ್ಚಿದ್ದ ಬಟ್ಟೆ ಭಾಗಶಃ ಕೆಳಕ್ಕೆ ಜಾರಿದ್ದು ಆತನ ಮುಖದಲ್ಲಿ ಬಾತು ಇರುವುದು ಕುಟುಂಬ ಸದಸ್ಯರು ಗಮನಿಸಿದ್ದಾರೆ ಎಂದು ತಿಳಿದು ಬಂದಿದೆ. ತುಕ್ರಪ್ಪ ಶೆಟ್ಟಿಯವರು ಯಾವಾಗಲೂ ಮನೆ ಬಾಗಿಲು ತೆರೆಯುವ ಮೊದಲು ಕೋವಿ ಹಿಡಿಯುತ್ತಿದ್ದರು. ಆದರೆ, ಅಂದು ಚುನಾವಣಾ ನಿಯಮಗಳ ಪ್ರಕಾರ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲಾಗಿತ್ತು. ಹೀಗಾಗಿ ದರೋಡೆಕೋರರು ಬಂದಾಗ ಕೋವಿ ಮನೆಯಲ್ಲಿ ಇರಲಿಲ್ಲ. ಇದು ದರೋಡೆಕೋರರಿಗೆ ವರವಾಗಿ ಪರಿಣಮಿಸಿತ್ತು. ಇನ್ನು ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಯಾವುದೇ ಅಪರಾಧ ಪ್ರಕರಣಗಳು ಹೊಂದಿರದ ಕೃಷಿಕರು ತಮ್ಮ ಬಳಿ ಕೋವಿಯನ್ನು ಉಳಿಸಿಕೊಳ್ಳಲು ಅವಕಾಶ ನೀಡಲು ಒತ್ತಾಯ ಮಾಡಿದ್ದರು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ಇನ್ನು ಶೆಟ್ಟಿಯವರ ಮಗಳು ತಮ್ಮ ರಕ್ಷಣೆಗಾಗಿ ಕೂಗಿದಾಗ ದರೋಡೆಕೋರರು ಕನ್ನಡ ಮತ್ತು ತುಳು ಮಿಶ್ರ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ತುಕ್ರಪ್ಪ ಶೆಟ್ಟಿಯವರ ಪತ್ನಿ ಗೀತಾ ಶೆಟ್ಟಿಯವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ವ್ಯಕ್ತಿಯು ತಾನು ದರೋಡೆ ನಡೆಸಿ ಹೊರಡುವಾಗ ಗೀತಾ ಶೆಟ್ಟಿಯವರಿಗೆ ನೀರು ಕುಡಿಸಿ, ನಾವು ಹೋದ ಬಳಿಕ ಆಂಬುಲೆನ್ಸ್‌ ತರಿಸಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿ ಪಾದ ಮುಟ್ಟಿ ನಮಸ್ಕರಿಸಿದ್ದಾನೆ ಎಂದು ವರದಿ ತಿಳಿಸಿದೆ. ದರೋಡೆಕಾರರ ಈ ವರ್ತನೆಯಿಂದಾಗಿ, ಶೆಟ್ಟಿಯವರು ಹಲವರಿಗೆ ಸಹಾಯ ಮಾಡಿರುವ ಕಾರಣ ಈ ಕೃತ್ಯ ಎಸಗಿದರವರು ಈ ಹಿಂದೆ ಶೆಟ್ಟಿಯವರಿಂದ ಸಹಾಯ ಪಡೆದವರೇ ಆಗಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು