Thursday, January 23, 2025
ಪುತ್ತೂರು

ಬಲ್ನಾಡು ಗ್ರಾಮದ ಕಾಡ್ಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಕಳವಾದ ಸೊತ್ತುಗಳು ಪತ್ತೆ- ಕಹಳೆ ನ್ಯೂಸ್

ಪುತ್ತೂರು: ಕಾರಣಿಕ ಕ್ಷೇತ್ರವಾಗಿರುವ ಬಲ್ನಾಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ನವೆಂಬರ್ 9ರಂದು ರಾತ್ರಿ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೈವದ ಬೆಳ್ಳಿ ಕವಚ ಮಾಡಿದ ಪಟ್ಟದ ಕಡ್ಸಲೆ , ಬೆಳ್ಳಿ ಕವಚದ ಹಿಡಿಕೆ ಇರುವ ಸುರಿಯಗಳು ಮತ್ತು ಧೂಮವತಿ ಕಡ್ಸಲೆ ಗಳು ಮುಂತಾದವುಗಳನ್ನು ಕಳವು ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ನವೆಂಬರ್ 10 ರಂದು ಸಂಜೆ ದೀಪ ಹಚ್ಚಲು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಇದೀಗ ಬಲ್ನಾಡು ಗ್ರಾಮದ ಕಾಡ್ಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಒಂದೂವರೆ ತಿಂಗಳ ಹಿಂದೆ ಕಳವಾದ ಸೊತ್ತುಗಳು ದೇವಸ್ಥಾನದಿಂದ ಸುಮಾರು 500 ಮೀಟರ್ ದೂರದಲ್ಲಿ ತರಗೆಲೆಗಳ ರಾಶಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯ ಮನೆಯವರು ತರಗೆಲೆ ರಾಶಿ ಮಾಡುವ ಸಂದರ್ಭದಲ್ಲಿ ಕಳವಾದ ದೈವದ ಎರಡು ಕಡ್ಸಲೆ ಮತ್ತು ಬೆತ್ತಗಳು ತುಂಡು ತುಂಡಾದ ರೀತಿಯಲ್ಲಿ ಪತ್ತೆಯಾಗಿತ್ತು. ಕೂಡಲೇ ಅವರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸಿದ್ದು, ಪತ್ತೆಯಾದ ಸೊತ್ತುಗಳು ದೈವಸ್ಥಾನಕ್ಕೆ ಸಂಬಂಧಿಸಿರುವುದಾಗಿ ದೃಡಪಡಿಸಿದ್ದಾರೆ.