Friday, September 20, 2024
ಸುದ್ದಿ

ವಿಶ್ವರಂಗಭೂಮಿ ದಿನಾಚರಣೆ ; ಯಕ್ಚಗಾನ ರಂದ ಅಪೂರ್ವ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರಿಗೆ ಪ್ರಶಸ್ತಿ – ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಮಾ. 27ರಂದು ನಡೆಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬೆಂಗಳೂರಿನ ವಿ.ಕೆ.ಎಂ. ಕಲಾವಿದರು ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಸಮಾರಂಭದೊಂದಿಗೆ ಕಾಸರಗೋಡು ಕರ್ನಾಟಕ ಉತ್ಸವ ನಡೆಯಿತು. ವಿಶ್ವರಂಗಭೂಮಿ ದಿನಾಚರಣೆಯನ್ನು ಮಾ. 27ರಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ, ರಂಗಭೂಮಿ, ಯಕ್ಷಗಾನ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸುದೀರ್ಘ‌ ಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಕಾಸರಗೋಡಿನ ಮೂರು ಮಂದಿ ಸಹಿತ ಕರ್ನಾಟಕದ ಒಟ್ಟು 7 ಮಂದಿಗೆ ವಿಶ್ವರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯಕ್ಚಗಾನ ರಂದ ಅಪೂರ್ವ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ರಂಗದ ಅಪೂರ್ವ ಸಾಧಕ ರಾಮಕೃಷ್ಣ ಮಯ್ಯ ಸಿರಿಬಾಗಿಲು :

ಜಾಹೀರಾತು

ಭಾಗವತ ಎಂದರೆ ಯಕ್ಷಗಾನ ರಂಗಭೂಮಿಯ ನಿರ್ದೇಶಕ. ಸಿರಿಬಾಗಿಲು ರಾಮಕೃಷ್ಣ ಮಯ್ಯರು ಧರ್ಮಸ್ಥಳ ಮೇಳದ ಭಾಗವತರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸ್ಥಾಪಿಸಿ ಯಕ್ಷಗಾನ ಪೂರ್ವರಂಗ, ಅರ್ಥಾಂತರಂಗವನ್ನು ಹೊಸ ಜನಾಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಾಧಕರಿಗೆ ಪ್ರತೀ ವರ್ಷವೂ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಪರಂಪರೆಯ ಉಳಿವಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವ ರಾಮಕೃಷ್ಣ ಮಯ್ಯರು ರಂಗಭೂಮಿಯ ಬಗ್ಗೆಯೂ ಪರಿಜ್ಞಾನವಿರುವ ಸಮರ್ಥ ಸಂಪನ್ಮೂಲ ವ್ಯಕ್ತಿ.

ಕನ್ನಡ ಗ್ರಾಮದಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ರಂಗಭೂಮಿ ಸಾಧಕರು ಹಾಗೂ ಸಂಘಟಕರಾದ ಬೆಂಗಳೂರಿನ ಎಂ.ಆರ್‌. ರಂಗರಾಮಯ್ಯ, ರತ್ನಾ ನಾಗೇಶ್‌, ಪಣಜಿಯ ಅರುಣ್‌ ಕುಮಾರ್‌ ಅವರನ್ನೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಕೆಎಂ ಕಲಾವಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಉಪಸ್ಥತರಿದ್ದರು.