ಭಾರತ-ಚೀನಾ ಹೊಸ ಅಧ್ಯಾಯಕ್ಕೆ ನೆರೆಯ ರಾಷ್ಟ್ರ ಚೀನಾ ಕರೆ…
ನವದೆಹಲಿ(ಅ.01): ಭಾರತ-ಚೀನಾ ಇತಿಹಾಸದ ಪುಟಗಳನ್ನು ತೆರೆದು ನೋಡಿ, ಹೊಸ ಅಧ್ಯಾಯವನ್ನು ಆರಂಭಿಸಬೇಕು. ದ್ವಿಪಕ್ಷೀಯ ನೆಲೆಯಲ್ಲಿ ಎರಡೂ ರಾಷ್ಟ್ರಗಳು ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಭಾರತಕ್ಕೆ ಚೀನಾದ ರಾಯಭಾರಿ ಲುವೊ ಜವೋ ಹ್ವಿ ಹೇಳಿದ್ದಾರೆ.
ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಸರಣಿಯಾಗಿ ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದ ಚೀನಾ, ಇದೀಗ ಶಾಂತಿಯ ಪ್ರಸ್ತಾಪ ಮುಂದಿಟ್ಟಿದೆ. ಭಾರತ ಹಾಗೂ ಚೀನಾ ಒಂದಾದರೆ ಹನ್ನೊಂದು ಆಗುತ್ತದೆ ಎಂದು ಚೀನಾ ರಾಯಭಾರಿ ಒಗ್ಗಟ್ಟಿನ ಮೂಲ ಮಂತ್ರ ಪಠಿಸಿದ್ದಾರೆ.
ಕ್ಸಿಯಾಮೆನ್’ನಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ವೇಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಿ, ಸಾಮರಸ್ಯ ಮತ್ತು ಸಹಕಾರದ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.