Thursday, January 23, 2025
ಪುತ್ತೂರು

ಬನ್ನೂರು ಹಲಂಗದಲ್ಲಿ ಪ್ರತ್ಯಕ್ಷವಾದ ಚಿರತೆ- ಕಹಳೆ ನ್ಯೂಸ್

ಪುತ್ತೂರು:ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ನಿನ್ನೆ ಬೆಳಿಗ್ಗೆ ನಸುಕಿನ ಜಾವ ಧನುಪೂಜೆಗೆ ಭಕ್ತರೊಬ್ಬರು ಹೋಗುತ್ತಿದ್ದ ವೇಳೆ ಅವರಿಗೆ ಬನ್ನೂರು ಹಲಂಗದಲ್ಲಿ‌ ಚಿರತೆಯೊಂದು ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಧ್ಯಾಹ್ನ ನಗರಸಭಾ ಮಾಜಿ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯೂ ಚಿರತೆ ಪ್ರತ್ಯಕ್ಷವಾಗಿದೆ. ಆಮೇಲೆ ನಗರಸಭಾ ಮಾಜಿ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯಿಂದ ಪಕ್ಕದ ತೆಂಗಿನ ಕೊಪ್ಪಳಕ್ಕೆ ಹೋಗಿದ್ದು, ಅಲ್ಲಿಂದ ಡಂಪಿಂಗ್ ಯಾರ್ಡ್ ಪಕ್ಕದ ಗುಡ್ಡೆಗೆ ಹೋಗಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು