Recent Posts

Monday, April 14, 2025
ಬೆಂಗಳೂರು

ಜನವರಿಯ ಮಧ್ಯಭಾಗದಲ್ಲಿ ಮತ್ತಷ್ಟು ಹೆಚ್ಚಲಿದೆ ಚಳಿ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಚಳಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಹಾಗೆ ಮುಂದಿನ ತಿಂಗಳು ಮತ್ತಷ್ಟು ಚಳಿ ಹೆಚ್ಚಾಲಿದ್ದು, ಶೀತ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಚಳಿ ವಿಪರೀತವಾಗಿದೆ. ಇನ್ನೆರಡು ದಿನ ಚಳಿ‌ ಕಡಿಮೆ ಇದ್ರೂ ನಂತರದಲ್ಲಿ ಮತ್ತೆ ಜಾಸ್ತಿಯಾಗಲಿದೆ. 2016 ರ ನಂತರ ಡಿಸೆಂಬರ್ 11 ರಂದು ‌ಮೊದಲ ಬಾರಿಗೆ ಕಡಿಮೆ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ 1,883ರ ಡಿಸೆಂಬರ್ 29ರಂದು ಅತೀ ಕಡಿಮೆ ಅಂದ್ರೆ 8.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ವಿಜಯಪುರ, ಬೀದರ್ ಮತ್ತು ಧಾರವಾಡದಲ್ಲೂ ಚಳಿ ಅಧಿಕವಾಗಿದೆ. ಇವೆಲ್ಲದ್ರ ನಡುವೆ ಜನವರಿ ಮಧ್ಯಭಾಗದಲ್ಲಿ ರಾಜ್ಯದ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಗೆ ಇಳಿಯಬಹುದು ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ