ಬೆಂಗಳೂರು: ಮಿಣಜಗಿ ತಂಡದ ಕೂಲಿ ಕಾರ್ಮಿಕ ಮಹಿಳೆ ತಾರಾಬಾಯಿ ತನ್ನ ಮಗ ಸುರೇಶ್ 2020 ಅಕ್ಟೋಬರ್ 20 ರಿಂದ ನಾಪತ್ತೆಯಾಗಿದ್ದಾನೆ ಎಂದು ಸ್ಪೇಷಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು.
ಆದರೆ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ. ಹಾಗೆಯೇ ನಾಪತ್ತೆಯಾಗಿರುವ ತಾರಾಬಾಯಿಯ ಮಗನನ್ನು ಹುಡುಕು ಪ್ರಯತ್ನ ಮಾಡಿರಲಿಲ್ಲ. ಈ ಕಾರಣದಿಂದಾಗಿ ತಾರಾಬಾಯಿ ತನ್ನ ಮಗನನ್ನು ಹುಡುಕಿಸಿ ಕೊಡುವಂತೆ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ , ನಾಪತ್ತೆಯಾಗಿರುವ ಸುರೇಶ್ ನನ್ನು ಹುಡುಕಿಕೊಡುವಂತೆ ನಿರ್ದೇಶಿಸಿದೆ. ಜೊತೆಗೆ ಕರ್ತವ್ಯಲೋಪ ಎಸಗಿರುವ ಇನ್ ಪೆಕ್ಟರ್ ಗೆ ಒಂದು ವಾರಗಳ ಕಾಲ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಕಸ ಗುಡಿಸಿ ಸ್ವಚ್ಚಗೊಳಿಸಬೇಕು ಎಂದು ತೀರ್ಪು ನೀಡಿದೆ.