Saturday, November 23, 2024
ಪುತ್ತೂರು

ಮುಳಿಯ ಜ್ಯುವೆಲ್ಸ್ ನ 75 ನೇ ವರ್ಷದ ಅಮೃತ ಮಹೋತ್ಸವ; ಪ್ರಥಮ ಹಂತದ ಲಕ್ಕಿ ಡ್ರಾ ಸಮಾರಂಭ- ಕಹಳೆ ನ್ಯೂಸ್

ಪುತ್ತೂರು: ಮುಳಿಯ ಜ್ಯುವೆಲ್ಸ್ ಅಮೃತ ಮಹೋತ್ಸವ ಸಂಭ್ರಮದ ಪ್ರಥಮ ಹಂತದ ಡ್ರಾ ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ 75ನೇ ವರ್ಷದ ಸಂಭ್ರಮದ 375 ಬಹುಮಾನಗಳ ಪ್ರಥಮ ಹಂತದ ಡ್ರಾ ಡಿಸೆಂಬರ್ 22 ರಂದು ಶೋರೂಂನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ್ ಕೆ.ವಿ ಮತ್ತು ಸುದ್ದಿ ದಿನಪತ್ರಿಕೆಯ CEO ಶ್ರೀ ಸೃಜನ್, ಶ್ರೀಮತಿ ಸುಜಾತ ಗಣಪತಿ ಭಟ್ ಮತ್ತು ಉದ್ಯಮಿ ಶ್ರೀ ರಾಘ್ನೇಶ್‌ರವರು ಡ್ರಾ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ CMD ಶ್ರೀ ಕೇಶವ ಪ್ರಸಾದ್ ಮುಳಿಯ ಮತ್ತು ಶಾಖಾ ಪ್ರಬಂಧಕ ಶ್ರೀ ನಾಮ್‌ದೇವ್ ಮಲ್ಯ, ಬೆಳ್ತಂಗಡಿ ಶಾಖಾ ಪ್ರಬಂಧಕ ಶ್ರೀ ಗುರುರಾಜ್ ಅವಭೃತ ಉಪಸ್ಥಿತರಿದ್ದರು. ಹಾಗೆಯೇ ಮುಖ್ಯ
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಸೃಜನ್ ನವರು ಮುಳಿಯ ಜ್ಯುವೆಲ್ಸ್ ನಲ್ಲಿ ಈ ಬಹುಮಾನ ಯೋಜನೆಯನ್ನು ತನ್ನ 75 ವರ್ಷದ ಆಚರಣೆಯ ಸಂದರ್ಭದಲ್ಲಿ ಹಮ್ಮಿಕೊಂಡಿದೆ. ಇದು ಜನರ ನಂಬಿಕೆಯನ್ನು ಉಳಿಸಿದೆ ಎಂದು ಮುಳಿಯ ಜ್ಯುವೆಲ್ಸ್ ಇತಹಾಸವನ್ನು ಮತ್ತು ಪರಂಪರೆಯನ್ನು ಉಲ್ಲೇಖಿಸಿ ವಿವರಿಸಿದರು. ಹಾಗೂ ಇನ್ನೋರ್ವ ಅತಿಥಿಯಾಗಿ ಮಾತನಾಡಿದ ಶ್ರೀ ಮನೋಹರ್ ಕೆ.ವಿ ಅವರು ಮುಳಿಯ ಸಂಸ್ಥೆಯು ಅಮೃತ ಮಹೋತ್ಸವ ಸಂದರ್ಭದಲ್ಲಿ ಗ್ರಾಹಕರಿಗೋಸ್ಕರ 375 ಬಹಮಾನಗಳನ್ನು ನೀಡಿರುವುದು ತುಂಬಾ ಶ್ಲಾಘನೀಯ ಮತ್ತು ವಿಜೇತರಿಗೆ ಅಭಿನಂದನೆಗಳು ಎಂದು ಹೇಳಿದರು. ಪ್ರಥಮ ಹಂತದ ಡ್ರಾದಲ್ಲಿ 5 Suzuki Access, Refrigerator ,ಚಿನ್ನದ ಆಭರಣ, ಡೈಮಾಂಡ್ ಆಭರಣ, ಮೊಬೈಲ್, ಗ್ರೈಂಡರ್, ಮಿಕ್ಸಿ, ಬೆಳ್ಳಿಯ ಆಭರಣಗಳು ಇತ್ಯಾದಿ ಒಟ್ಟು 115 ಬಹುಮಾನಗಳನ್ನು ಡ್ರಾ ನಡೆಸಲಾಯಿತು. ಡ್ರಾ ಕಾರ್ಯಕ್ರಮವನ್ನು ಮುಳಿಯ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸಂಸ್ಥೆಯ ಸಿಬ್ಬಂದಿ ಪವಿತ್ರ ಯು ಹಾಗೂ ಅಸಿಸ್ಟೆಂಟ್ ಶೋರೂಂ ಮ್ಯಾನೇಜರ್ ಸತ್ಯಗಣೇಶ್ ನಿರ್ವಹಿಸಿದರು. ಹಾಗೂ ಸಂಜೀವ, ಪ್ರವೀಣ್, ಶಂಕರ್ ನಾರಾಯಣ, ಜಯಂತ್, ರಮೇಶ್ ಗೌಡ ಮತ್ತು ಸಂಸ್ಥೆಯ ಗ್ರಾಹಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ದ್ವಿತೀಯ ಹಂತ ಮತ್ತು ಬಂಪರ್ ಬಹುಮಾನವನ್ನು ಮುಂದಿನ ಆರು ತಿಂಗಳಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.