Thursday, January 23, 2025
ಬೆಳ್ತಂಗಡಿ

ಗ್ರಾಮ ಪಂಚಾಯತ್ ಚುನಾವಣೆ ಪ್ರಯುಕ್ತ ಬಂದಾರು ಗ್ರಾಮದ ಮೈರೋಳ್ತಡ್ಕ -2 ವಾರ್ಡ್ ಮನೆಗೆ ಜಿಲ್ಲಾಧ್ಯಕ್ಷರ ತಂಡದಿಂದ ಭೇಟಿ – ಕಹಳೆ ನ್ಯೂಸ್

ಬೆಳ್ತಂಗಡಿ: ಬಂದಾರು 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಡಿಸೆಂಬರ್ 27ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆ ಚುನಾವಣೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಕಾರಣದಿಂದಾಗಿ ಬಂದಾರು ಗ್ರಾಮದ ಮೈರೋಳ್ತಡ್ಕ-2 ನೇ ವಾರ್ಡ್ನಲ್ಲಿ ಮನೆಗೆ ಜಿಲ್ಲಾಧ್ಯಕ್ಷರ ತಂಡದಿಂದ ಭೇಟಿ ನೀಡಿ ಶುಭಾಶಯ ತಿಳಿಸಿದರು.  ಈ ಕಾರ್ಯಕ್ರಮಕ್ಕೆ ಜಿಲ್ಲಾದ್ಯಕ್ಷ ಸುದರ್ಶನ ಮೂಡಬಿದ್ರೆ ಅವರು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಹ ಪ್ರಭಾರಿ. ಶ್ರೀಮತಿ ಕಸ್ತೂರಿ ಪಂಜ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಸುಧೀರ್ ಶೆಟ್ಟಿ ಕಣ್ಣೂರು, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸತೀಶ್ ಕುಂಪಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಾಗೆಯೇ ಪ್ರಮುಖ ಅಭ್ಯರ್ಥಿಗಳಾದ ದಿನೇಶ್ ಗೌಡ ಖಂಡಿಗ, ರುಕ್ಮಯ ಪೂಜಾರಿ ಮುರ್ತಾಜೆ, ಶರತ್ ಮುರ್ತಾಜೆ, ಶ್ರೀಮತಿ ಪವಿತ್ರ ಅಶೋಕ್ ಗೌಡ ಪಾಂಜಾಳ,ಜಗದೀಶ್ ಗೌಡ ಕೊಂಬೇಡಿ, ಗಿರೀಶ್ ಗೌಡ ಬಿ.ಕೆ ಕುಂಬುಡಂಗೆ, ಶ್ರೀಮತಿ ಪರಮೇಶ್ವರಿ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಜಿಲ್ಲಾಧ್ಯಕ್ಷರ ತಂಡದಿಂದ ಭೇಟಿ ನೀಡಿ ಶುಭಾಶಯ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು