Thursday, January 23, 2025
ಪುತ್ತೂರು

ವಿವೇಕಾನಂದ ಎಂ.ಸಿ. ಜೆ. ವಿಭಾಗದಲ್ಲಿ ವಿಡಿಯೋ ಎಡಿಟಿಂಗ್ ಕಾರ್ಯಾಗಾರ -ಕಹಳೆ ನ್ಯೂಸ್

ಪುತ್ತೂರು: ಸಿನೆಮಾ, ಟಿವಿ ಪತ್ರಿಕೋದ್ಯಮ, ಜಾಹೀರಾತು ಕ್ಷೇತ್ರ ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವೀಡಿಯೋ ಎಡಿಟಿಂಗ್ ಕಲಿತವರಿಗೆ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ತಕ್ಕಂತೆ ಯುವ ಜನತೆ ಎಡಿಟಿಂಗ್ ಕ್ಷೇತ್ರದೆಡೆಗೆ ಮುಖ ಮಾಡುತ್ತಿದ್ದಾರೆ.

‘ಕೋವಿಡ್-೧೯’ ಲಾಕ್ ಡೌನ್ ಸಮಯದಲ್ಲಿ ಎಡಿಟಿಂಗ್ ಕ್ಷೇತ್ರ ಅನೇಕರಿಗೆ ವರಮಾನದ ಮೂಲವೂ ಆಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಧನುಷ್ ಕೊರಂಬಡ್ಕ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾ ವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ, ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು. ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲಿಯಲೇ ಬೇಕಾದ ಪ್ರಾಯೋಗಿಕ ವಿಷಯಗಳಲ್ಲಿ ವೀಡಿಯೋ ಎಡಿಟಿಂಗ್ ಕೂಡ ಒಂದು. ನಮಗೆ ವೀಡಿಯೋ ಎಡಿಟಿಂಗ್ ತಿಳಿದಿದ್ದರೆ, ವಿದ್ಯುನ್ಮಾನ ಮಾಧ್ಯಮಕ್ಕೆ ಸಂಬOಧಿಸಿ ನಮ್ಮದೇ ರೀತಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮದೇ ವಾಹಿನಿಯನ್ನು ಮುನ್ನಡೆಸುತ್ತಾ, ಆದಾಯವನ್ನೂ ಪಡೆಯಬಹುದಾಗಿದೆ  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಂ.ಸಿ.ಜೆ. ವಿದ್ಯಾರ್ಥಿಗಳಿಗೆ ವೀಡಿಯೋ ಎಡಿಟಿಂಗ್ ಸಾಫ್ಟ್ವೇರ್‌ಗಳ ಕುರಿತಾಗಿ ಮಾಹಿತಿ ನೀಡಿದ ಅವರು, ಅಡೋಬ್ ಪ್ರೀಮಿಯರ್ ಪ್ರೊ ಹಾಗೂ ಅಡೋಬ್ ಆಫ್ಟರ್ ಎಫೆಕ್ಟ್ ಸಾಫ್ಟವೇರ್‌ಗಳ ಬಳಕೆ ಕುರಿತಾಗಿ ತರಬೇತಿ ನೀಡಿದರು. ಈ ಸಂದರ್ಭ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಶ್ಮಿತಾ ಜಯಾನಂದ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ ಸ್ವಾಗತಿಸಿ ಉಪನ್ಯಾಸಕ ಅಕ್ಷತ್ ಭಟ್ ವಂದಿಸಿದರು. ಉಪನ್ಯಾಸಕಿ ಸೀಮಾ ಪೋನಡ್ಕ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು