Friday, September 20, 2024
ಸುದ್ದಿ

ಅಮೆರಿಕದಲ್ಲಿ ಪಾಕ್ ಪ್ರಧಾನಿಯ ಕೋಟ್ ತೆಗೆದು ತಪಾಸಣೆ – ಕಹಳೆ ನ್ಯೂಸ್

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹೀದ್ ಖಾಕಾನ್ ಅಬ್ಬಾಸಿ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೋಟ್ ತೆಗೆದು ತಪಾಸಣೆ ನಡೆಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಪ್ರಧಾನಿ ಶಾಹಿದ್ ಅಬ್ಬಾಸಿಯವರನ್ನು ನ್ಯೂಯಾರ್ಕ್ ನಲ್ಲಿರುವ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಕೋಟು ತೆಗೆಸಿ ತಪಾಸಣೆ ಮಾಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿ ಪ್ರಕಟಗೊಂಡ ಬಳಿಕ ಪಾಕ್ ಮಾಧ್ಯಮಗಳು ಅಮೆರಿಕವನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಧಾನಿ ಅಬ್ಬಾಸಿ ಅವರನ್ನು ಅಮೆರಿಕ ಸರ್ಕಾರ ಅವಮಾನಿಸಿದೆ ಎಂದು ಬರೆದುಕೊಂಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಿದ್ದು ಏನು? : 

ಜಾಹೀರಾತು

ಕಳೆದ ವಾರದಂದು ಅಬ್ಬಾಸಿ ತಮ್ಮ ಸಹೋದರಿಯನ್ನು ಭೇಟಿ ಮಾಡಲು ಅಮೆರಿಕಗೆ ಭೇಟಿ ನೀಡಿದ್ದರು. ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದ ಅಬ್ಬಾಸಿಯನ್ನು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕೋಟ್ ತೆಗೆದು ತಪಾಸಣೆ ನಡೆಸಿದ್ದರು. ಅಬ್ಬಾಸಿ ಕೋಟನ್ನು ಹೆಗಲಿಗೆ ಹಾಕಿಕೊಂಡು ಒಂದು ಕೈಯಲ್ಲಿ ಸೂಟ್‍ಕೇಸ್ ಹಿಡಿದು ತಪಾಸಣೆಗೆ ಒಳಪಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶೇಷ ಏನೆಂದರೆ ಈ ಭೇಟಿ ವೇಳೆ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡಾ ಅಬ್ಬಾಸಿ ಭೇಟಿ ಮಾಡಿದ್ದರು.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಪಾಕ್ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂದು ಟ್ರಂಪ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ನವಾಜ್ ಶರೀಫ್ ಪ್ರಧಾನಿ ಹುದ್ದೆಯನ್ನು ತೊರೆದ ಬಳಿಕ ಅವರ ಸಹೋದರ ಅಬ್ಬಾಸಿ ಅಧಿಕಾರಕ್ಕೇರಿದ್ದರು.