Saturday, November 23, 2024
ರಾಜ್ಯ

ರಾಜ್ಯದ ತೆಂಗು ಬೆಳೆಗಾರರಿಗೆ ಶುಭಸುದ್ದಿ : 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ – ಕಹಳೆ ನ್ಯೂಸ್

ತುಮಕೂರು : ತೆಂಗು ಬೆಳೆಗಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ತೆಂಗು ಬೆಳೆ ಉದ್ಯಮಕ್ಕೆ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ಕೃಷಿ ಇಲಾಖೆಯ ಹೊಸ ಯೋಜನೆ ಪ್ರಾರಂಭಿಸುವ ತೆಂಗು ಬೆಳೆ ಅವಲಂಬಿತ ಕಿರು ಉದ್ಧಿಮೆ, ರೈತ ಉತ್ಪಾದಕರ ಸಂಸ್ಥ, ಸ್ವ-ಸಹಾಯ ಗುಂಪು ಹಾಗೂ ಉತ್ಪಾದಕರ ಸಹಕಾರಿಗಳಿಗೆ ಶೇ. 3.5 ರಷ್ಟು ಬಡ್ಡಿದರದಲ್ಲಿ 10 ಲಕ್ಷ ರೂ. ಸಾಲವನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಹಾರ ಸಂಸ್ಕರಣ ಕೈಗಾರಿಕೆಗಳ ಮಂತ್ರಾಲಯವು ಪೂರಕ ಬೆಂಬಲ ಹಾಗೂ ಸೇವೆಗಳ ಪ್ಯಾಕೇಜ್ ಮೂಲಕ ಜಾರಿಗೆ ತಂದಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಈ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಆಸಕ್ತ ಉದ್ದಿಮೆ, ಸಂಸ್ಥೆಗಳು ಯೋಜನೆಯ ವಿಸ್ತೃತ ವರದಿ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಮಟ್ಟದ ಸಮಿತಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು